ಮುಳಬಾಗಿಲು: ಕಂದಾಯ ಅಧಿಕಾರಿಗಳುಯಾರದೇ ಒತ್ತಡಕ್ಕೆ ಮಣಿಯದೇ ಕ್ರೆçಸ್ತ ಮಿಷನರಿಗಳು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಗೋಮಾಳ ಜಾಗವನ್ನು ತೆರವುಗೊಳಿಸಬೇಕೆಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಒತ್ತಾಯಿಸಿದರು.
ತಾಲೂಕಿನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧ ಎದುರು ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ದುಗ್ಗಸಂದ್ರ ಹೋಬಳಿ ನಾಚಹಳ್ಳಿಯ ಸರ್ವೆ ನಂ.168 ರಲ್ಲಿ 300 ಎಕರೆಗೋಮಾಳಜಮೀನಿದ್ದು, ಈ ಜಮೀನನ್ನು ಕ್ರೆçಸ್ತ ಮಿಷನರಿಗಳು ಅಕ್ರಮವಾಗಿ ವಶಪಡಿಸಿಕೊಂಡು ಏಸುವಿನ ಪ್ರತಿಮೆಯನ್ನು ನಿರ್ಮಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಆರೋಪಿಸಿದರು. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಗೋಮಾಳ ಜಾಗ ಸರ್ವೆ ಮಾಡಿಸಿ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರಾಮಮೂರ್ತಿ ಮಾತನಾಡಿ, ಕ್ರೆçಸ್ತ ಮಿಷನರಿಗಳು ಸರ್ಕಾರಿ ಜಮೀನನ್ನು ಅಕ್ರಮವಾಗಿಸ್ವಾಧೀನಪಡಿಸಿಕೊಂಡಿದ್ದಾರೆಂದು ಆರೋಪಿಸಿ ಸದರಿ ಜಾಗವನ್ನು ಕಂದಾಯ ಇಲಾಖೆ ವಶಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯೊಂದಿಗೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್‌ಗೆ ಮನವಿ ಸಲ್ಲಿಸಿದರು.
ಡಿವೈಎಸ್‌ಪಿ ನಾರಾಯಣಸ್ವಾಮಿ, ಸಿಪಿಐ ಗೋಪಾಲ್‌ನಾಯಕ್, ಗ್ರಾಮಾಂತರ ಠಾಣೆ ಪಿಎಸ್‌ಐ ಪ್ರದೀಪ್‌ಸಿಂಗ್, ನಗರ ಠಾಣೆ ಪಿಎಸ್‌ಐ ಎಂ.ಶ್ರೀನಿವಾಸ್, ನಂಗಲಿ ಠಾಣೆ ಪಿಎಸ್‌ಐ ಚೌಡಪ್ಪಮತ್ತು ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು. ಮುಖಂಡರಾದ ಶಂಕರಿ ಕೇಸರ್, ಎಚ್.ಎಸ್. ಹರೀಶ್, ಬಿ.ಕೆ.ಅಶೋಕ್, ಶಕ್ತಿಪ್ರಸಾದ್, ಪಿ.ಎಂ.ಕೃಷ್ಣಮೂರ್ತಿ, ಕಲ್ಲುಪಲ್ಲಿ ಮೋಹನ್, ಕೇಶವಮೂರ್ತಿ, ಹೆಬ್ಬಣಿ ರವಿ, ಮೈಕ್ ಶಂಕರ್, ಎಂ.ಪಿ.ಅನಿಲ್‌ಕುಮಾರ್, ಬೇಕರಿ ವೇಣು, ಶಿವು, ವಿಶ್ವನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.