Advertisement

ಶಾಸಕಿ ಮನೆ ಮುಂದೆ ಧರಣಿ

11:15 AM May 24, 2022 | Team Udayavani |

ಕಲಬುರಗಿ: ನಗರದ ಫಿರದೋಸ್‌ ಕಾಲೋನಿಯ 2 ವರ್ಷದ ಮಗು ಮುಜಮ್ಮಿಲ್‌ ನ ಕೊಲೆ ಮಾಡಿ ಮರಳಿನಲ್ಲಿ ಬಚ್ಚಿಟ್ಟದ್ದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿರುವುದನ್ನು ಖಂಡಿಸಿ ಸೋಮವಾರ ಉತ್ತರ ಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ ಮನೆ ಮುಂದೆ ಕುಟುಂಬಸ್ಥರು ಹಾಗೂ ಕಾಲೋನಿ ನಿವಾಸಿಗಳು, ಬಂಧುಗಳು ಪ್ರತಿಭಟನೆ ಮಾಡಿದರು.

Advertisement

ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ದೇಹವನ್ನು ಮರಳಿನಲ್ಲಿ ಮುಚ್ಚಿಡಲಾಗಿತ್ತು. ಪ್ರಕರಣ ನಡೆದು 6 ತಿಂಗಳು ಕಳೆದರೂ ಇನ್ನೂವರೆಗೆ ಪೊಲೀಸರು ಒಬ್ಬರನ್ನು ಬಂಧಿಸಿಲ್ಲ. ಪ್ರಕರಣವನ್ನು ಕೂಡಲೇ ಉನ್ನತ ತನಿಖೆಗೆ ನೀಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲಾನಾಬಾದ್‌ ಇತ್ತೇಹಾದ್‌ ಕಮೀಟಿಯ ನೌಶಾದ್‌ ಅಲಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next