Advertisement

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ: ಪಿ.ಆರ್.ಸುಧಾಕರ್ ಲಾಲ್

06:01 PM Sep 14, 2022 | Team Udayavani |

ಕೊರಟಗೆರೆ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕರುನಾಡಿನಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ತುಳಿಯುವ ಪ್ರಯತ್ನ ಬೇಡ.ಹಿಂದಿ ದಿವಸ್ ಆಚರಣೆ ದಿನವನ್ನು ಕರಾಳ ದಿನವನ್ನಾಗಿ ನಾವು ಆಚರಣೆ ಮಾಡುತ್ತೇವೆ ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯ ಆವರಣದಲ್ಲಿ ಜಾತ್ಯತೀತ ಜನತಾದಳ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಣಧೀರರ ವೇದಿಕೆ, ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬುಧವಾರ ಏರ್ಪಡಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಮಾಜಿ ಸಿಎಂ ಕುಮಾರಣ್ಣ ನೇತೃತ್ವದ ಜಾತ್ಯತೀತ ಜನತಾದಳ ಪಕ್ಷದಿಂದ ಹಿಂದಿ ದಿವಸ್ ವಿರುದ್ದವಾಗಿ ಪ್ರತಿಭಟನೆ ನಡೆಯುತ್ತಿದೆ. ಕನ್ನಡಿಗರ ಮೇಲೆ ಬಲವಂತಹ ಹಿಂದಿಬಾಷೆಯ ಏರಿಕೆಯ ಒತ್ತಡ ಬೇಡ. ನಮ್ಮ ನೆಲ, ಜಲ ಮತ್ತು ಬಾಷೆಯ ವಿಚಾರದಲ್ಲಿ ಸಮಸ್ಯೆಯಾದ್ರೇ ನಾವು ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಕೊರಟಗೆರೆ ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ ಹಿಂದಿ ದಿವಸ ಆಚರಣೆಗೆ ಆದೇಶ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಮ್ಮ ದಿಕ್ಕಾರವಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮಾತ್ರ ಅವಕಾಶ ನೀಡಬೇಕಿದೆ. ಜೆಡಿಎಸ್ ಪಕ್ಷ ಮತ್ತು ಕನ್ನಡಪರ ಸಂಘಟನೆಯಿಂದ ಸಾಕಷ್ಟು ವಿರೋಧವಿದೆ. ಕೇಂದ್ರ ಸರಕಾರದ ಬಲವಂತವಾಗಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಬಾರದು ಎಂದು ಹೇಳಿದರು.

ಕೇಂದ್ರ ಸರಕಾರದ ಹಿಂದಿ ದಿವಸ್ ಆಚರಣೆಯ ಆದೇಶಕ್ಕೆ ಕರವೇಯಿಂದ ಖಂಡನೆ. ಕರ್ನಾಟಕ ಜನತೆಯ ತೆರಿಗೆಯ ಹಣದಿಂದ ಹಿಂದಿ ದಿವಸ್ ಆಚರಣೆ ಬೇಡ. ಭಾರತ ಮತ್ತು ಕರ್ನಾಟಕ ಆಳುತ್ತಿರುವ ರಾಜಕೀಯ ನಾಯಕರ ಕುತಂತ್ರವು ಹೆಚ್ಚುಕಾಲ ಇರುವುದಿಲ್ಲ. ಕನ್ನಡಿಗರನ್ನು ರಾಜಕೀಯ ನಾಯಕರು ಕೆಣಕುವ ಪ್ರಯತ್ನ ಮಾಡಬೇಡಿ ಎಂದು ಕೊರಟಗೆರೆ ಕರವೇ ಅಧ್ಯಕ್ಷ ಕೆ.ಎನ್.ನಟರಾಜ್ ಹೇಳಿದರು.

Advertisement

ಪ್ರತಿಭಟನೆಯಲ್ಲಿ ಕೋಳಾಲ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಜೆಡಿಎಸ್ ಪಕ್ಷದ ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಪಪಂ ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಕರವೇ ಅಧ್ಯಕ್ಷ ಕೆ.ಎನ್.ನಟರಾಜ್, ರಣಧೀರರ ವೇದಿಕೆ ಅಧ್ಯಕ್ಷ ದೇವರಾಜು, ಮಂಜುಸ್ವಾಮಿ, ಗ್ರಾಪಂ ಅಧ್ಯಕ್ಷರಾದ ಶಿವರಾಮಯ್ಯ, ರಮೇಶ್, ಮುಖಂಡರಾದ ಬಸವರಾಜು, ಮರುಡಪ್ಪ, ಸೈಯದ್‌ಸೈಪುಲ್ಲಾ, ರಾಜಣ್ಣ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next