Advertisement

ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ

02:50 PM Nov 03, 2020 | Suhan S |

ಶಿಗ್ಗಾವಿ: ತಾಲೂಕಿನ ಕಲ್ಯಾಣ ಗ್ರಾಮದ ರೈತರ ಹೊಲಗಳಿಗೆ ಹೋಗಲು ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಕಲ್ಯಾಣ ಗ್ರಾಮದ ರೈತರು ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ರೈತರಾದ ಚನ್ನಪ್ಪ ಕೋರಿ, ದ್ಯಾಮಣ್ಣ ಕೋರಿ, ಬಸಪ್ಪಕೋರಿ, ರಾಮಣ್ಣ ಹೊಸಕಟ್ಟಿ, ಯಲ್ಲಪ್ಪ ಹೊಸಕಟ್ಟಿ, ಶೇಖಣ್ಣ ಹೊಸಕಟ್ಟಿ, ಬಸವಣ್ಣೆಪ್ಪ ರಾಮಾಪುರ, ಬಸವಣ್ಣೆಪ್ಪ ಬರದೂರ ಸೇರಿದಂತೆ, ಅನೇಕ ರೈತರಹೊಲಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ.ಅದೇ ಗ್ರಾಮದ ರೈತ ಮಹದೇವಪ್ಪ ಕುಂದಗೋಳ ಹೊಲಗಳಿಗೆ ತೆರಳುವ ರೈತರಿಗೆ ಇಲ್ಲಿ ಓಡಾಡಲು ರಸ್ತೆ ಇಲ್ಲವೆಂದು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಾವು ಭೂಮಾಪಕ ಅಧಿ ಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದೀರಿ. ಆದರೆ ಇದುವರೆಗೂ ರೈತರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ ಎಂದು ದೂರಿದ ಪ್ರತಿಭಟನಾಕಾರರು ತಕ್ಷಣ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ದನ- ಕರು,ಚಕ್ಕಡಿಯೊಂದಿಗೆ ಕುಟುಂಬದವರು ತಹಶೀಲ್ದಾರ್‌ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ತಹಶೀಲ್ದಾರ್‌ ಪ್ರಕಾಶ ಕುದರಿ ಸ್ಥಳಕ್ಕೆ ಭೇಟಿನೀಡಿ, ಈಗ ಹೊಲಗಳಲ್ಲಿ ಬೆಳೆಗಳಿದ್ದು ತಕ್ಷಣ ದಾರಿ ನಿರ್ಮಿಸುವುದು ಕಷ್ಟಕರ. ಫೆಬ್ರುವರಿವರೆಗೆ ಕಾಲಾವಕಾಶ ನೀಡಿದರೆ ಅಷ್ಟರೊಳಗಾಗಿ ಹೊಲಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ರೈತರ ಸಮಸ್ಯೆಗೆ ಪರಿಹಾರ ಒದಗಿಸಿ :

Advertisement

ಹಾನಗಲ್ಲ: ಕಳೆದ ಮೂರ್‍ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರೈತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದುಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ತಹಶೀಲ್ದಾರ್‌ ಪಿ.ಎಸ್‌. ಎರ್ರಿಸ್ವಾಮಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳೆವಿಮಾ ಪರಿಹಾರ, ನೆರೆ ಪ್ರವಾಹದಿಂದಾದ ಹಾನಿಗೆ ಪರಿಹಾರ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತ ಸಮುದಾಯಕ್ಕಾದ ಸಮಸ್ಯೆಗಳಿಗೆ ಕೂಡಲೇ ಪರಿಹಾರಒದಗಿಸದಿದ್ದರೆ ನ.12ರಂದು ಕನಕದಾಸ ಉದ್ಯಾನವನದ ಎದುರು ರಸ್ತೆ ತಡೆದು ಹೋರಾಟಮಾಡುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಗೌರವಾಧ್ಯಕ್ಷ ಮಾಲತೇಶ ಪರಪ್ಪನವರ, ಶಹರ ಘಟಕದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ಕಾರ್ಯದರ್ಶಿ ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next