Advertisement

ಮೂಲ ಸೌಕರ್ಯಕ್ಕಾಗಿ ನಗರಸಭೆ ಎದುರು ಪ್ರತಿಭಟನೆ

12:39 PM Aug 04, 2019 | Suhan S |

ಹೊಸಪೇಟೆ: ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ಡಿವೈಎಫ್ಐ ತಾಲೂಕು ಘಟಕದ ನೇತೃತ್ವದಲ್ಲಿ ಏಳನೇ ವಾರ್ಡು ನಿವಾಸಿಗಳು ನಗರಸಭೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಪಾಂಡುರಂಗ ಕಾಲೋನಿ, ಅನಂತಶಯನಗುಡಿ, ಎಂ.ಪಿ.ಪ್ರಕಾಶ ನಗರ, ಸಾಯಿ ಕಾಲೋನಿ, ಶ್ರೀರಾಮ ನಗರ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು. ನಿವೇಶನರಹಿತರಿಗೆ ನಗರಸಭೆ ಕೂಡಲೇ ನಿವೇಶನ ನೀಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ವಿವರ ಪ್ರಕಟಣೆ ಹೊರಡಿಸಬೇಕು. ನಿವೇಶನಕ್ಕಾಗಿ ಅರ್ಜಿ ಹಾಕದೇ ಉಳಿದ ಅರ್ಜಿದಾರ ಅರ್ಜಿ ಸ್ವೀಕಾರ ಮಾಡಬೇಕು. ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಅಶ್ರಯ ಯೋಜನೆ ಫ‌ಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಬೇಕು. ಪಾಂಡುರಂಗ ಕಾಲೋನಿ, ಅನಂತಶಯನಗುಡಿ, ಎಂ.ಪಿ.ಪ್ರಕಾಶ ನಗರ, ಸಾಯಿ ಕಾಲೋನಿ, ಶ್ರೀರಾಮ ನಗರ ಪ್ರದೇಶಗಳಿಗೆ ಡ್ಯಾಂ ನೀರು ಪೂರೈಕೆಗಾಗಿ ನಿರಂತರ ಕುಡಿಯುವ ನೀರು ಯೋಜನೆ ಅನುಷ್ಠಾನ ಹಾಗೂ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯಿಂದ ಅಗೆದು ಬಿಟ್ಟ ರಸ್ತೆಗಳನ್ನು ಮರು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.

ಈ ಕುರಿತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. 2017-18 ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಅರ್ಜಿ ಹಾಕಿದ ಪಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಮತಿ ಪತ್ರ ನೀಡಬೇಕು.ಅನಂತಶಯನ ಗುಡಿ ಹಾಗೂ ನಾಗೇನಹಳ್ಳಿ ರಸ್ತೆಯಲ್ಲಿರುವ ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸಬೇಕು. ಪಾಂಡುರಂಗ ಕಾಲೋನಿ ಮಹಿಳಾ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಬೇಕು. ಪಾರಂ-3 ಗಾಗಿ ನಾಗರಿಕರನ್ನು ಅಲೆದಾಡಿಸದೇ ನಿಗದಿತ ಸಮಯದಲ್ಲಿ ಒದಗಿಸಬೇಕು.ಹಂದಿ-ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬೇಕು. ಅನಂತಶಯನ ಗುಡಿ ಬೈಪಾಸ್‌ ರಸ್ತೆ ಬೀದಿ ದೀಪಗಳನ್ನು ಸರಿಪಡಿಸಬೇಕು.ಸಾರ್ವಜನಿಕ ರುದ್ರಭೂಮಿ ಸ್ವಚ್ಛಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಡಿವೈಎಫ್ಐ ತಾಲ್ಲೂಕು ಘಟಕದ ಮುಖಂಡರಾದ ಬಿಸಾಟಿ ಮಹೇಶ್‌, ಕಲ್ಯಾಣಯ್ಯ, ಕಿನ್ನಾಳ್‌ ಹನುಮಂತಪ್ಪ, ಈ ಮಂಜುನಾಥ, ಬಂಡೆ ತಿರುಕಪ್ಪ, ಹನುಮಾನಾಯ್ಕ, ರಾಜಚಂದ್ರಶೇಖರ್‌, ಸೂರ್ಯಕಿರಣ ಹಾಗೂ ನಿಂಗಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next