ಪಣಂಬೂರು: ಈ ಹಿಂದೆ ಬಾವಿ ತೋಡುತ್ತಿದ್ದ ದಿನಗಳಿದ್ದವು. ಆದರೆ ಇತ್ತೀಚಿಗೆ ಎಷ್ಟು ಆಳಕ್ಕೆ ಹೋದರೂ ಅಂತರ್ಜಲ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ದಿನ ತಿಂಗಳು ಗಟ್ಟಲೆ ಬಾವಿ ತೋಡಿ ನೀರು ಸಿಗದಿದ್ದರೆ ಶ್ರಮ ವ್ಯರ್ಥ. ಇದಕ್ಕೆ ಪರ್ಯಯವಾಗಿ ಬಂದ ಬೋರುವೆಲ್ (ಕೊಳವೆ ಬಾವಿ) ತೋಡುವ ಕ್ರಮದಿಂದ ರೈತರು ಸೇರಿದಂತೆ ಹಲವರು ಪ್ರಯೋಜನ ಪಡೆದಿದ್ದಾರೆ. ಆದರೆ ಇದೀಗ ಕೊಳವೆ ಬಾವಿ ತೋಡುವ ಸಂಸ್ಥೆಗಳು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕೋವಿಡ್ ಹೊಡೆತ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 80ಕ್ಕೂ ಮಿಕ್ಕಿ ಕೊಳವೆಬಾವಿ ತೋಡುವ ಯಂತ್ರಗಳು (ರಿಗ್) ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿವೆ. ವಾಹನಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನು ಮಾಲಕರು ತಲುಪಿದ್ದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವ್ಯಾಲಂಟೈನ್ಸ್ ಡೇ ಗೆ ಹುಡುಗಿಯರ ಕಾಟ ತಪ್ಪಿಸಲು 5 ದಿನ ರಜೆ ಕೊಡಿ ಸರ್.. ರಜಾರ್ಜಿ ವೈರಲ್
ಇದರಿಂದ ಅವಿಭಜಿತ ಜಿಲ್ಲೆಯಲ್ಲಿ ಯಾವುದೇ ಕೊಳವೆ ಬಾವಿ ತೋಡುವುದು ಸ್ಥಗಿತಗೊಳ್ಳಲಿದೆ. ಕೋವಿಡ್ ಬಳಿಕ ಏರಿದ ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳು ಸಿಗದೆ ಸಮಸ್ಯೆ, ಮುಖ್ಯವಾಗಿ ಉತ್ತರ ಭಾರತದ ಕಾರ್ಮಿಕರನ್ನು ಇಲ್ಲಿಗೆ ಕರೆ ತರುವುದು ಒಂದು ಸವಾಲಾದರೆ, ಅವರ ವೇತನ, ಭತ್ಯೆ, ವಸತಿಯದ್ದು ಮತ್ತೊಂದು ಸಮಸ್ಯೆಯಾಗಿದೆ.
ಸರಕಾರಿ ಯೋಜನೆ ಸೇರಿದಂತೆ, ಕೊಳವೆ ಬಾವಿಗಳಿಗೆ ನಾಡಿನಾದ್ಯಂತ ಇದೀಗ ಬೇಡಿಕೆ ಹೆಚ್ಚಿದ್ದರೂ ಕೊಳವೆ ಯಂತ್ರಗಳನ್ನು ಅದೇ ದರದಲ್ಲಿ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಹೀಗಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಕೆಲಸ ನಿಲ್ಲಿಸಿ ತಮ್ಮ ಸಂಕಷ್ಟಗಳನ್ನು ಸರಿಪಡಿಸಿಕೊಳ್ಳಲು ಮಾಲಿಕರು ಮುಂದಾಗಿದ್ದಾರೆ.
ಇದನ್ನೂ ಓದಿ: ಮುಂದುವರಿದ ರಾಗಿಂಗ್ ಹಾವಳಿ: ಮಂಗಳೂರಿನಲ್ಲಿ 11 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಪ್ರತಿ ಯಂತ್ರದಲ್ಲಿ 30 ಮಂದಿ ಕಾರ್ಮಿಕರು ಬೇಕಾಗುತ್ತದೆ. ಇವರಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದಾರೆ. ಇನ್ನೊಂದೆಡೆ ತೀವ್ರಗತಿಯಲ್ಲಿ ಏರುತ್ತಿರುವ ಇಂಧನ ಬೆಲೆ ನಮ್ಮನ್ನು ಕಂಗಾಲು ಮಾಡಿದೆ. ಇತ್ತ ಕೊಳವೆ, ಬಿಡಿ ಭಾಗಗಳು ದುಬಾರಿಯಾಗಿದೆ. ಕೊಳವೆ ಬಾವಿ ತೋಡಲು ಈಗಿರುವ ದರಕ್ಕಿಂತ ಶೇ40ರಷ್ಟು ಹೆಚ್ಚು ಮಾಡಿದರೆ ಮಾತ್ರ ಯಂತ್ರ ಮತ್ತೆ ಪುನರಾರಂಭ ಮಾಡಬಹುದು ಎಂದು ದ.ಕ ಉಡುಪಿ ಜಿಲ್ಲಾ ರಗ್ ಮಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.