Advertisement
ಸೇನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಭೀಮರಾಯ ನ ಗುಡಿಕೆಬಿಜೆಎನ್ನೆಲ್ ಇಲಾಖೆಗೆ 2014ರಿಂದ 2018ರ ವರೆಗೆ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸಾವಿರಾರು ಕೋಟಿ ರೂ. ಅನುದಾನ ಬಂದಿದೆ. ಆದರೆ ಅನುದಾನ ಸಮರ್ಪಕವಾಗಿ ಸದ್ಬಳಕೆ ಆಗಿಲ್ಲ. ಅಧಿಕಾರಿಗಳು ಬಡವರಿಗೆ ಯೋಜನೆಗಳನ್ನು ತಲುಪಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.2014-15ನೇ ಸಾಲಿಗೆ ಎಸ್‌ಸಿಪಿಯಲ್ಲಿ 4.59 ಕೋಟಿ ರೂ., ಟಿಎಸ್‌ಪಿಯಲ್ಲಿ 24.75 ಕೋಟಿ ರೂ., 2015-16ನೇ ಸಾಲಿನ ಟಿಎಸ್ ಪಿಯಲ್ಲಿ 2.35 ಕೋಟಿ ರೂ., 2016-17ನೇ ಸಾಲಿನ ಟಿಎಸ್‌ಪಿಯಲ್ಲಿ 3 ಕೋಟಿ ರೂ., 2017-18ನೇ ಸಾಲಿನ ಎಸ್‌ಸಿಪಿಯಲ್ಲಿ 700 ಕೋಟಿ ರೂ., ಟಿಎಸ್‌ಪಿಯಲ್ಲಿ 200 ಕೋಟಿ ರೂ., ಅನುದಾನ ಬಳಕೆ ಆಗಿಲ್ಲ. ಇದರಿಂದ ಪರಿಶಿಷ್ಟ ಜನಾಂಗಕ್ಕೆ ಸಮರ್ಪಕವಾಗಿ ಯೋಜನೆ ತಲುಪುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ದೂರಿದರು.
ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೂಡಲೇ ಈ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಅನುದಾನ ಬಳಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿ ಗಳ ಮೇಲೆ ಪರಿಶಿಷ್ಟ ದೌರ್ಜನ್ಯತಡೆ ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಅಧಿಕಾರಿಗೆ ಬರೆದ ಬೇಡಿಕೆಗಳ ಮನವಿಯನ್ನು ಶಿರಸ್ತೇದಾರ ಶರಣುಕುಮಾರ ಅವರಿಗೆ ಸಲ್ಲಿಸಿದರು.
ಮುಖಂಡರಾದ ಮಾನಯ್ಯ ದೊರೆ, ತಿರುಪತಿ ನಾಯಕ, ನಾಗಪ್ಪ ಕನ್ನೆಳ್ಳಿ, ಅಂಬಣ್ಣ ದೊರೆ, ಹಣಮಂತ್ರಾಯ ಬಾದ್ಯಾಪುರ ಇದ್ದರು.