Advertisement

ನಿವೇಶನ ಮಂಜೂರು ಮಾಡಿ

04:20 PM Nov 24, 2020 | Suhan S |

ಮಂಡ್ಯ: ನಿವೇಶನಕ್ಕೆ ಗುರುತಿಸಿರುವ ಸರ್ಕಾರಿ ಭೂಮಿಯನ್ನು ವಿತರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಕಾರ್ಯಗತಗೊಳಿಸದ ಹಿನ್ನೆಲೆಯಲ್ಲಿ ಬೂದನೂರು ಗ್ರಾಮ ಪಂಚಾಯ್ತಿ ನಿವೇಶನ ರಹಿತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮತ್ತೆ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ಆರಂಭಿಸಿದರು.

Advertisement

ಕಳೆದ ಅ.12ರಿಂದ 6 ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದ ನಿವೇಶನ ರಹಿ ತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಜಿಲ್ಲಾಡಳಿತದ ಪ್ರತಿನಿಧಿಯಾಗಿ ಆಗಮಿಸಿದ್ದ ಮಂಡ್ಯ ತಹಶೀಲ್ದಾರ್‌ ಅವರ ಭರವಸೆ ಈಡೇರಿಸಲಿಲ್ಲ ಎಂದು ನಿವೇಶನ ರಹಿತರು ಅಳಲು ತೋಡಿಕೊಂಡರು.

ಡೀಸಿ ಆಶ್ರಯ ಬಡಾವಣೆ ನಾಮಫ‌ಲಕ ಪ್ರದರ್ಶನ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರು ಜಿಲ್ಲೆಗೆ ಆಗಮಿಸಿದ ಬಳಿಕ ನೂರಾರು ಎಕರೆ ಸರ್ಕಾರಿ ಭೂಮಿಯನ್ನುಗುರುತಿಸಿ, ಬಡಜನರಿಗೆ ಹಂಚುವ ಕಾರ್ಯಕ್ರಮ ರೂಪಿಸಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ನಮ್ಮ ಗ್ರಾಮದಲ್ಲಿ ನಿರ್ಮಾಣವಾಗುವ ಬಡಾವಣೆಗೆ “ಡಾ.ಎಂ.ವಿ.ವೆಂಕಟೇಶ್‌ ಆಶ್ರಯ ಬಡಾವಣೆ’ ನಾಮಕರಣ ಮಾಡ ಲಾಗುವುದುಎಂದುನಾಮಫ‌ಲಕಪ್ರದರ್ಶನ ಮಾಡಿದರು.

ದಾಖಲೆ ತಿರುಚುವ ಯತ್ನ: ಬೂದನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 50 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ಅದರಲ್ಲಿ ಗ್ರಾಮದ ಸರ್ವೆ ನಂ.190/ಪಿ10ರ 2 ಎಕರೆ ಭೂಮಿಯನ್ನು ನಿವೇಶನ ಯೋಗ್ಯ ಭೂಮಿ ಎಂದು ಹಿಗುರುತಿಸಿ ಸರ್ಕಾರಕ್ಕೆ ವರದಿ ಮಾಡಿದ್ದರು. ಸದ್ಯ ಅಳತೆ, ಹದ್ದುಬಸ್ತ್ ಮಾಡುವ ಬದಲು ಪ್ರಭಾವಿಗಳ ಒತ್ತಡಕ್ಕೆಮಣಿದು ದಾಖಲೆಗಳನ್ನು ತಿರುಚುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಸ್ಪಂದಿಸಿಲ್ಲ: ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶಮಾತನಾಡಿ,ಕಳೆದ4 ವರ್ಷಗಳಿಂದ ನಿವೇಶನರಹಿತರು ಹಲವು ಮನವಿ ನೀಡಿ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಸ್ಪಂದಿಸದೆ ಅಮಿಷಗಳಿಗೆ ಬಲಿಯಾಗಿ ನಿವೇಶನ ರಹಿತರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತನಿಖೆನಡೆಸಿ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿವೇಶನ ರಹಿತರು ಆಗ್ರಹಿಸಿದರು.

Advertisement

ಪ್ರತಿಭಟನಾ ಧರಣಿಯಲ್ಲಿ ಗ್ರಾಪಂ ಮಾಜಿ ಸದಸ್ಯ ಕುಳ್ಳಪ್ಪ, ಸಿಐಟಿಯುನ ಪ್ರೇಮ, ಸುಧಾ, ಚೇತನ್‌, ಯಲ್ಲಮ್ಮ, ಕಾಮಾಕ್ಷಿ, ರಜನಿ ಮೊದಲಾದವರಿದ್ದರು.

ಜಿಲ್ಲಾಡಳಿತ ನೀಡಿರುವ ಗಡುವು ಮುಗಿದಿದೆ. ಹಾಗಾಗಿ ಸರ್ಕಾರಿ ಭೂಮಿ 1-5 ಮಾಡುವ ಮುನ್ನಾ ದಿಶಾಂಕ್‌ ತಂತ್ರಾಂಶ ಬಳಸಿ, ಭೂಮಿ ಗುರುತಿಸಿಕೊಡಬೇಕು. ಬೇಡಿಕೆ ಈಡೇರದಿದ್ದಲ್ಲಿ ಗ್ರಾಮ ಸಭೆಯಲ್ಲಿ ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕರಿಸುವ ನಿರ್ಣಯಕೈಗೊಂಡು ಮನವಿ ನೀಡಲಾಗಿದೆ. ಎಂ.ಬಿ.ನಾಗಣ್ಣಗೌಡ, ಸಂಚಾಲಕ, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next