Advertisement

ಮಾಸಾಶನ ಬಿಡುಗಡೆಗೆ ವಿಳಂಬವೇಕೆ?

06:38 PM Oct 13, 2020 | Suhan S |

ಮೊಳಕಾಲ್ಮೂರು: ತಾಲೂಕಿನಲ್ಲಿ ಸಂಧ್ಯಾ ಸುರಕ್ಷಾ, ಅಂಗವಿಕಲರು ಹಾಗೂ ನಿರ್ಗತಿಕರ ವೇತನ,ವಿಧವಾ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸೆಂಟರ್‌ ಆಫ್‌ಇಂಡಿಯನ್‌ ಟ್ರೇಡ್‌ ಯೂನಿಯನ್‌ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಾಲೂಕಿನ ರಾಂಪುರ ನಾಡಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ ಮಾತನಾಡಿ, ರಾಜ್ಯ ಸರ್ಕಾರ ಕಳೆದಆರು ತಿಂಗಳುಗಳಿಂದ ವೃದ್ಧಾಪ್ಯ, ವಿಧವೆಯರು ಹಾಗೂ ಅಂಗವಿಕಲರಿಗೆ ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ ಬಿಡುಗಡೆ ಮಾಡಿಲ್ಲ. ಇದರಿಂದ ಬಡ ಕುಟುಂಬದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವೇತನದಿಂದ ಸಾಕಷ್ಟು ಬಡವರು ಹಾಗೂ ನಿರ್ಗತಿಕರು ಜೀವನ ರೂಪಿಸಿಕೊಂಡಿದ್ದರು. ಅರ್ಹ ಫಲಾನುಭವಿಗಳಿಗೆ ಈ ಮಾಸಿಕ ವೇತನ ನಿಲುಗಡೆಯಾಗಿರುವುದರಿಂದಅತಂತ್ರರಾಗಿದ್ದಾರೆ. ಪಿಂಚಣಿದಾರರುರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮೊದಲಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಊಟ, ತಿಂಡಿ ಹಾಗೂ ಚಿಕಿತ್ಸೆ ಪಡೆಯಲುಸಾಧ್ಯವಾಗದೆ ಮಕ್ಕಳಿಂದ ತಿರಸ್ಕಾರಕ್ಕೊಳಗಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಆರೋಪಿಸಿದರು.

ಮಹಾಮಾರಿ ಕೋವಿಡ್ ಭೀತಿಯ ಪರಿಣಾಮ ಯಾವುದೇ ದುಡಿಮೆ, ಕೆಲಸ ಕಾರ್ಯಗಳಿಲ್ಲದೆ ಕುಟುಂಬಗಳು ಉಪವಾಸದಿಂದ ನರಳಿ ಜೀವನ ಸಾಗಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ವೇತನವನ್ನು ನಂಬಿಕೊಂಡಿರುವ ಅರ್ಹರಿಗೆಸುಮಾರು ಆರು ತಿಂಗಳುಗಳಿಂದಲೂ ಮಾಶಾಸನ ನೀಡದಿರುವುದು ನ್ಯಾಯೋಚಿತವಲ್ಲ. ಮಾಸಾಶನಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಲವಾರು ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಮಾಸಾಶನ ಬಿಡುಗಡೆಯಾಗುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಂಪುರ ನಾಡಕಚೇರಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿ. ಬಸಣ್ಣ, ರಾಮಲಿಂಗಪ್ಪ, ಗಾದೆಪ್ಪ, ನಾಗರಾಜ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next