Advertisement

ಭೂ ಹಕ್ಕಿಗಾಗಿ ಬೃಹತ್‌ ಪಾದಯಾತ್ರೆ

06:29 PM Oct 03, 2020 | Team Udayavani |

ಹಿರಿಯೂರು: ಸ್ವಾತಂತ್ರ್ಯ ಬಂದು 73 ವರ್ಷ ಕಳೆದರು ರೈತರಿಗೆ ಭೂಮಿಯ ಹಕ್ಕು ಸಿಕ್ಕಿಲ್ಲದಿರುವುದು ದೇಶದ ದುರಂತ ಎಂದು ರೈತ ಹೋರಾಟಗಾರ ಕಸುವನಹಳ್ಳಿ ರಮೇಶ್‌ ಹೇಳಿದರು.

Advertisement

ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಅರಣ್ಯ ಹಕ್ಕು ಸಮಿತಿ ತಾಲೂಕಿನ ಯಲ್ಲದಕೆರೆ ಗ್ರಾಮದಿಂದ ಹಿರಿಯೂರು ತಾಲೂಕು ಕಚೇರಿವರೆಗೆ ಸುಮಾರು 25 ಕಿಮೀ ಪಾದಯಾತ್ರೆ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಆಡಳಿತ ಸರ್ಕಾರಿ ಮತ್ತುಅರಣ್ಯ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವರೈತರಿಗೆ ಭೂಮಿಯ ಒಡೆತನದ ಹಕ್ಕನ್ನು ನೀಡಬೇಕು. ರೈತರಿಗೆ ಹಕ್ಕು ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು. ಉಳುವವನೆ ಭೂಮಿಯ ಒಡೆಯ, ರೈತರೇ ಅದರ ಮಾಲೀಕರು. ಆದ್ದರಿಂದ ಸರ್ಕಾರ ಉಳುವ ರೈತನಿಗೆ ಭೂ ಒಡೆತನದ ಹಕ್ಕುನ್ನು ನೀಡಬೇಕು ಎಂದು ಒತ್ತಾಯಿಸಿದರು.

ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕಿ ರೂಪಾ ನಾಯ್ಕ ಮಾತನಾಡಿ, ಆಳುವಂತಹ ಸರ್ಕಾರಗಳು ಬಂಡವಾಳ ಶಾಹಿಗಳ ಪರ ಇರದೆ, ಬೆವರು ಸುರಿಸಿಭೂಮಿಯಲ್ಲಿ ಪ್ರತಿ ದಿನ ಕಷ್ಟಪಡುವ ರೈತನ ಪರ ನಿಲ್ಲಬೇಕು. ಅವರಿಗೆ ಸವಲತ್ತು ನೀಡಬೇಕು. ಆಗ ದೇಶ ಸಮೃದ್ಧಿಯಾಗುತ್ತದೆ ಎಂದರು. ರೈತರಿಗೆ ಕೂಡಲೇ ಭೂಮಿಯ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಹುಲಗಲಕುಂಟೆ ರಂಗಸ್ವಾಮಿ, ರೈತ ಸಂಘದ ಮುಖಂಡ ಕೆ.ಟಿ. ತಿಪ್ಪೇಸ್ವಾಮಿ, ರವಿಕುಮಾರ್‌, ಯಲ್ಲದಕೆರೆ ಜಯಣ್ಣ, ಮೇಟಿಕುರ್ಕೆ ಶಶಿಕಲಾ, ತಿಮ್ಮಕ್ಕ, ರಾಮಚಂದ್ರ, ಜೈರಾಮ್‌, ಬಬ್ಬೂರು ಉಮೇಶ್‌, ವಿವಿ ಪುರ ಪ್ರೇಮನಾಥ್‌ ಗಿರಿಸ್ವಾಮಿ, ನರಸಿಂಹಯ್ಯ, ವಿಜಯಣ್ಣ, ದಾದಾಪೀರ್‌, ಹುಸೇನ್‌, ಲೋಕಮ್ಮ, ಹರ್ತಿಕೋಟೆ ಉಪಸ್ಥಿತರಿದ್ದರು.

 ರೈತ ಸಂಘಟನೆಗಳಿಂದ ಪ್ರತಿಭಟನೆ :

ಚಿತ್ರದುರ್ಗ: ರೈತ ವಿರೋಧಿ , ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿ ರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ರೈತ ಸಂಘದ ಎರಡು ಬಣಗಳಿಂದ ಪ್ರತ್ಯೇಕವಾಗಿ ಧರಣಿ ನಡೆಯಿತು.

Advertisement

ನಗರದ ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದ ರೈತ ಸಂಘಟನೆಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮೂಲಕ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಕೇಂದ್ರ-ರಾಜ್ಯಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ನಡೆಸುವುದಾಗಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಎಚ್ಚರಿಸಿದರು.

ಉತ್ತರ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿ ನಿಷ್ಕರುಣೆಯಿಂದ ದೇಹವನ್ನು ಸುಟ್ಟುಹಾಕಿರುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಿ ಯುವತಿಯ ಆತ್ಮಕ್ಕೆ ಶಾಂತಿ ನೀಡಬೇಕಾಗಿದೆ ಎಂದರು.

ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ ಬಾಬು, ಧನಂಜಯ, ರುದ್ರಸ್ವಾಮಿ, ಮುದ್ದಾಪುರದ ನಾಗಣ್ಣ, ತಿಪ್ಪೇಸ್ವಾಮಿ, ಕೆ.ಹೊರಕೇರಪ್ಪ, ಟಿ.ಶμವುಲ್ಲಾ, ಎಸ್‌.ಕೆ.ಮಹಾಂತೇಶ್‌, ಧನಂಜಯ ಮತ್ತಿತರರು ಭಾಗವಹಿಸಿದ್ದರು.

ಕೃಷಿ ನಾಶದ ಹುನ್ನಾರ: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತ ವಿರೋಧಿ  ಸುಗ್ರಿವಾಜ್ಞೆ ಜಾರಿ ಮಾಡುತ್ತಿರುವುದು ಕೃಷಿ ನಾಶದ ಹುನ್ನಾರ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಹೇಳಿದರು. ರೈತ ವಿರೋಧಿ , ಕಾರ್ಮಿಕ ವಿರೋ ಧಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ವಿದ್ಯುತ್‌ ಖಾಸಗೀಕರಣ ಮಾಡುತ್ತಿರುವುದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತ ಕುಟುಂಬ ಮತ್ತು ರೈತ ಕಾರ್ಮಿಕರ ಬದುಕು ಅತಂತ್ರವಾಗಲಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್‌, ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕಾರ್ಯದರ್ಶಿ ಡಿ.ಎಸ್‌. ಮಲ್ಲಿಕಾರ್ಜುನ್‌, ಅಪ್ಪರಸನಹಳ್ಳಿ ಬಸವರಾಜಪ್ಪ, ಸದಾಶಿವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next