Advertisement

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

02:24 PM May 21, 2022 | Team Udayavani |

ನೆಲಮಂಗಲ: ನ್ಯಾ.ನಾಗಮೋಹನದಾಸ್‌ ವರದಿಯಂತೆ ಪ.ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ17ಕ್ಕೆ ಹಾಗೂ ಪ. ಪಂಗಡದವರ ಮೀಸಲಾತಿ ಶೇ. 3ರಿಂದ ಶೇ. 7.5ಕ್ಕೆ ಹೆಚ್ಚಿಸಬೇಕು ಎಂದು ವಾಲ್ಮೀಕಿನಾಯಕರ ಸಂಘದ ತಾಲೂಕು ಅಧ್ಯಕ್ಷ ಬಿ. ಎನ್‌. ನರಸಿಂಹಮೂರ್ತಿ ಸರ್ಕಾರ ವನ್ನು ಒತ್ತಾಯಿಸಿದರು.

Advertisement

ರಾಜ್ಯ ಸ್ವಾಭಿಮಾನಿ ಪ.ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದಅವರು, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಮೀಸಲಾತಿ ಹೆಚ್ಚಳದ ಕುರಿತಾಗಿ ನಡೆಸುತ್ತಿರುವ100ನೇ ದಿನದ ಧರಣಿ ಬೆಂಬಲಿಸಿ ಎಲ್ಲ ದಲಿತಪರಸಂಘಟನೆಗಳ ಸಹಕಾರದಿಂದ ಮೀಸಲಾತಿಹೋರಾಟ ಕ್ರಿಯಾಸಮಿತಿ ನಡೆಸಿದ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ನ್ಯಾ.ನಾಗಮೋಹನದಾಸ್‌ ವರದಿ ನೀಡಿ ಇಷ್ಟು ದಿನ ಕಳೆದರೂ, ಮೀಸಲಾತಿ ಹೆಚ್ಚಳದಕುರಿತಾಗಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಜನಸಂಖ್ಯೆಅನುಗುಣವಾಗಿ ಸಂವಿಧಾನ ಬದ್ಧವಾದ ಹಕ್ಕನ್ನುಕೇಳುತ್ತಿದ್ದೇವೆ. ಮೀಸಲಾತಿ ಸಂವಿಧಾನಬದ್ಧವಾದಹಕ್ಕು ಅದನ್ನು ಕೇಳಲಾಗುತ್ತಿದೆಯೇ ಹೊರತಾಗಿಬೇರೆನೂ ಕೇಳುತ್ತಿಲ್ಲ, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆಎಂದು ಎಚ್ಚರಿಸಿದರು.

ವರದಿ ಜಾರಿಗೆ ಸರ್ಕಾರ ಮೀನಾಮೇಷ: ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಈರಣ್ಣಮೌರ್ಯ ಮಾತನಾಡಿ, ಬಾಬಾ ಸಾಹೇಬ್‌ಅಂಬೇಡ್ಕರ್‌ ಸಂವಿಧಾನದಲ್ಲಿ ನೀಡಿರುವಹಕ್ಕುಗಳನ್ನು ಸರ್ಕಾರ ನೀಡುವಲ್ಲಿ ಮೀನಮೇಷಎಣಿಸುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದರೂ, ಹಳೇಮೀಸಲಾತಿ ನೀಡಲಾಗುತ್ತಿದೆ. 2018ರಲ್ಲಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಪಾದ  ಯಾತ್ರೆ ಮೂಲಕ ಮೀಸಲಾತಿ ಹೆಚ್ಚಳಕ್ಕೆ ಗಮನ ಸೆಳೆದಿದ್ದರು. ಅಂದಿನ ಮುಖ್ಯಮಂತ್ರಿಗಳು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಸಮಿತಿ ರಚಿಸಿ ವರದಿಯನ್ನು ಪಡೆದುಕೊಂಡಿದ್ದರು. ಆದರೆ, ವರದಿಯ ಜಾರಿಗೆ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಬೇಸರದ ಸಂಗತಿ ಎಂದರು.

ಪ್ರತಿಭಟನಾ ಮೆರವಣಿಗೆ: ಪಟ್ಟಣದ ಪ್ರವಾಸಿ ಮಂದಿರದಿಂದ ಮುಖ್ಯರಸ್ತೆಯ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರಾಜ್ಯ ಸ್ವಾಭಿಮಾನಿ ಪ.ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಕಾರ್ಯಕರ್ತರು ಮತ್ತುಮುಖಂಡರು ತಹಶೀಲ್ದಾರ್‌ ಕೆ.ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್‌.ಭಾಸ್ಕರ್‌ ಪ್ರಸಾದ್‌,ಜಿಪಂ ಮಾಜಿ ಸದಸ್ಯ ಚೆಲುವರಾಜು, ದಲಿತಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷ ಗಂಗಬೈಲಪ್ಪ, ಮಾದಿಗ ಮಹಾ ಸಭಾದ ಕನಕರಾಜು, ಜಯನಗರ ಗಂಗಾ ಧರ್‌, ನಿಡವಂದ ರಾಜು, ನಾಗರಾಜು, ಬಿಎಸ್‌ಪಿ ಜಿಲ್ಲಾಸಂಘಟನಾ ಕಾರ್ಯದರ್ಶಿ ಮುನಿರಾಜು, ತಾಲೂಕು ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಚಿಕ್ಕರಂಗಣ್ಣ, ತ್ಯಾಮಗೊಂಡ್ಲು ಹೋಬಳಿ ಕಾರ್ಯದರ್ಶಿ ಲಿಂಗರಾಜು ಹಾಗೂ ದಲಿತ ಪರ ಸಂಘಟನೆಗಳ ಕಾರ್ಯಕರ್ತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next