ಮದ್ದೂರು: ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ದೆಹಲಿ ಚಲೋ ಪ್ರತಿಭಟನೆಯಲ್ಲಿ ರೈತರನ್ನು ಬಂಧನ ಮಾಡಲಾಗಿದೆ. ಇವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ದೆಹಲಿ ಚಲೋ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ ಮೇಲೆ ಲಾಠಿ ಚಾರ್ಚ್ ನಡೆಸಿ, ಕೆಲ ರೈತರ ಬಂಧನಕ್ಕೆ ಖಂಡನೆ. ಕೇಂದ್ರ ಸರ್ಕಾರಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸುವ ಜತೆಗೆ ಭೂ ಸ್ವಾಧೀನಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಬಡವರಿಗೆ ನೆರವು ನೀಡಿ: ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ 200 ದಿನ ಕೆಲಸ, ದಿನಕ್ಕೆ 600 ಕೂಲಿ ಜಾರಿಗೊಳಿಸಬೇಕು. ಪಟ್ಟಣ ಪ್ರದೇಶಕ್ಕೂ ವಿಸ್ತರಿಸಿ, ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಆದಾಯ ತೆರಿಗೆ ಕಟ್ಟದ ಕುಟುಂಬಗಳಿಗೆ 7.5 ಸಾವಿರ ರೂ. ಪಾವತಿಸಿ, ಪ್ರತಿ ಕುಟುಂಬಕ್ಕೆ 10 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆಹಕ್ಕುಪತ್ರ, ಮೂಲ ಸೌಲಭ್ಯ ಹಾಗೂ ವಸತಿ ರಹಿತರಿಗೆ ನಿವೇಶನ ಹಂಚಬೇಕು ಎಂದು ಆಗ್ರಹಿಸಿದರು.
ಸಂಘಟನೆ ವಿರೋಧದ ನಡುವೆಯೂ ಸರ್ಕಾರ ಕಾಯ್ದೆ ಜಾರಿಗೆ ಮುಂದಾದಲ್ಲಿಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದುಎಂದು ಎಚ್ಚರಿಕೆ ನೀಡಿ ಅಂಚೆ ಕಚೇರಿಯ ವ್ಯವಸ್ಥಾಪಕಿ ಪಾರ್ವತಮ್ಮ ಅವರಿಗೆ ಮನವಿಸಲ್ಲಿಸಿದರು. ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಪದಾಧಿಕಾರಿಗಳಾದ ಎಚ್.ಸಿ. ನಾಗರಾಜು, ಬಿ.ಎಂ. ಪ್ರಮೀಳಾ, ಮನೋಹರ, ನಾಗಮ್ಮ, ಅಶ್ವಿನಿ, ಮಂಜುನಾಥ್ ಹಾಜರಿದ್ದರು.