ಇಳಕಲ್ಲ: ಉತ್ತರಪ್ರದೇಶದಲ್ಲಿ ನಡೆದ ಮಹಿಳೆಯ ಹತ್ಯೆ ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಗರ ಘಟಕದಿಂದ ತಹಶೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಹಿಳೆಯರ ರಕ್ಷಣೆಯನ್ನು ಖಾತ್ರಿ ಪಡಿಸುವುದು ಸರಕಾರ ಮತ್ತು ಪೊಲೀಸ್ ಇಲಾಖೆಯಾಗಿದೆ. ಉತ್ತರ ಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವ ನಿಟ್ಟಿನಲ್ಲಿ ರಾಷ್ಟ್ರಪತಿಯವರು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ನಗರ ಘಟಕ ಒತ್ತಾಯಿಸಿ ಮನವಿ ಸಲ್ಲಿಸಿತು.
ನಗರಸಭೆ ಸದಸ್ಯೆ ರೇಶ್ಮಾ ಮಾರಬಸರಿ, ರುಕಯ್ಯ ಭನ್ನು, ಸ್ವಾಲಿಯಾ ನದಾಫ್, ತಯ್ಯಬಾ ಹುಂಡೇಕಲ್ಲ, ಅಫಸಾನಾ ಡಿಗ್ಗಿವಾಲೆ, ಅಪ್ರೋಜಾ ಡಿಗ್ಗಿವಾಲೆ, ಫಜಾ ಚಾವಣಿ ಪಾಲ್ಗೊಂಡಿದ್ದರು.