Advertisement

ನಿವೇಶನ ಒದಗಿಸಲು ಆಗ್ರಹಿಸಿ ಪ್ರತಿಭಟನೆ

12:06 PM Feb 11, 2020 | Team Udayavani |

ಕಮಲನಗರ: ನಿವೇಶನ ಇಲ್ಲದವರಿಗೆ ನಿವೇಶನ ನಿರ್ಮಿಸಿಕೊಡುವ ಕುರಿತು ಸುಳ್ಳು ಭರವಸೆ ನೀಡಿದ್ದನ್ನು ಖಂಡಿಸಿ ಸೋಮವಾರ ಬಾಲಿಕಾ ಶ್ರೀಮಂತ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಕಮಲನಗರ ಪಟ್ಟಣದಲ್ಲಿ ಒಂದು ದಶಕಕ್ಕಿಂತ ಹೆಚ್ಚು ಕಾಲ ವಾಸವಾಗಿದ್ದು, ಸ್ವಂತ ಮನೆ ಇಲ್ಲದ ಕಾರಣ ಬಾಡಿಗೆ ಮನೆಯಲ್ಲೇ ಜೀವನ ನಡೆಸುತ್ತಿದ್ದೇವೆ ಎಂದು ಬಾಲಿಕಾ ಶ್ರೀಮಂತ ತಮ್ಮ ಅಳಲು ತೋಡಿಕೊಂಡರು. ಫೆಬ್ರವರಿ 2 ಮತ್ತು 11ರಂದು ಹಾಗೂ ಡಿಸೆಂಬರ್‌ 2 ರಂದು ನಿವೇಶನ ಒದಗಿಸಲು ಒತ್ತಾಯಿಸಿ ಕಮಲನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು.

ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್‌, ಪಿಡಿಒ , ಸಹಾಯಕ ನಿರ್ದೇಶಕ ಭೇಟಿ ನೀಡಿ ವಸತಿ ರಹಿತ ಕುಟುಂಬದವರಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ಈಡೇರಿಸಿಲ್ಲ ಎಂದು ರಾಜು ಭಾಂಡೇವಾಲೆ ವ್ಯವಸ್ಥೆಗೆ ಹಿಡಿಶಾಪ ಹಾಕಿದರು. ಪಿಡಿಒ ವಿನೋದ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತ ಮಹಿಳೆಯರ ಬೇಡಿಕೆಗಳನ್ನು ಆಲಿಸಿದರು. ಬಳಿಕ ಪಿಡಿಒ ಮಾತನಾಡಿ, ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಈಗಾಗಲೇ 1,072 ಮನೆ ಮಂಜೂರಿಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಚಂದ್ರಕಲಾ ದೀಪಕ, ಮಹಾನಂದಾ ಸಂತೋಷ, ಸಂತೋಷಿ ಇಂದ್ರಜೀತ, ರೇಣುಕಾ ದಿಲೀಪ, ಸುಜಾತಾ ಸಂಜು, ಶ್ರೀದೇವಿ ವಿನೋದ, ಶಿವಾನಿ ಅಂಬಾದಾಸ, ರೇಣುಕಾ ಸೂರ್ಯಕಾಂತ, ನಾಗಿನ ಅರ್ಜುನ, ಗೌಳನಬಾಯಿ ರಾಜಕುಮಾರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next