Advertisement

ಪರಿಶಿಷ್ಟ ಪಂಗಡ ಪ್ರಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

10:01 AM Jul 24, 2020 | Suhan S |

ಕಲಬುರಗಿ: ತಳವಾರ ಜಾತಿಯ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಖೀಲ ಕರ್ನಾಟಕ ತಳವಾರ ಪರಿವಾರ ಬುಡಕಟ್ಟು ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕೇಂದ್ರ ಸರ್ಕಾರ ತಳವಾರ ಪರಿವಾರ ಹಾಗೂ ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಿದ್ದಿ ಜನಾಂಗಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿರುತ್ತಾರೆ. ಕೆಲವು ಕಡೆ ಪ್ರಮಾಣ ಪತ್ರ ನೀಡಲಾಗಿರುತ್ತದೆ. ಆದರೆ ತಮಗೆ ಕೊಡಲಾಗುತ್ತಿಲ್ಲ ಎಂದು ತಳವಾರ ಪರಿವಾರದವರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಅಖೀಲ ಕರ್ನಾಟಕ ತಳವಾರ ಬುಡಕಟ್ಟು ಹೋರಾಟ ಸಮಿತಿಯ ಲಚ್ಚಪ್ಪ ಎಸ್‌. ಜಮಾದಾರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next