ಯಾದಗಿರಿ: ದೇಶದಲ್ಲಿ ಪಿಎಫ್‌ಐ-ಎಸ್‌ಡಿಪಿಐ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಶ್ರೀರಾಮಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಶ್ರೀರಾಮಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ ಮಾತನಾಡಿ, ದೇಶದಲ್ಲಿ ಈ ಸಂಘಟನೆಗಳು 2047ರ ವೆಳೆಗೆ ಇಸ್ಲಾಮೀಕರಣಗೊಳಿಸುವುದು, ಸಂವಿಧಾನ ರಾಷ್ಟ್ರಧ್ವಜ, ದಲಿತರನ್ನು ಮುಂಚೂಣಿಯಲ್ಲಿ ಉಪಯೋಗಿಸಿ ಇಸ್ಲಾಂ ರಾಷ್ಟ್ರ ಘೋಷಣೆ ಮಾಡುವುದು, ಸಮಾಜ-ದೇಶ ದ್ರೋಹಕ್ಕಾಗಿ ಆಂತರಿಕ ಸೈನಿಕ ಶಕ್ತಿ ಪಿಎಫ್‌ಐ ನಿರ್ಮಿಸಿದೆ ಎಂದು ಆರೋಪಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಸಿಎಂ ಅಚ್ಯುತನ್ ಪಿಎಫ್‌ಐ ಭಯೋತ್ಪಾದನಾ ಸಂಘಟನೆಗಳ ಸಂಪರ್ಕದಲ್ಲಿದ್ದ ಕಾರಣಕ್ಕೆ ಕೇಂದ್ರಕ್ಕೆ ಈ ಸಂಘಟನೆ ನಿಷೇಧಿಸುವಂತೆ ಸ್ವತಃ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿರುವ ಈ ಇಬ್ಬರು ಮುಖಂಡರು ಪತ್ರ ಬರೆದಿರುವುದೇ ಸಾಕ್ಷಿ ಎಂದು ಆರೋಪಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಎಲ್ಲ ನಾಯಕರು, ಕಾಂಗ್ರೆಸ್ ನಾಯಕರು, ಮುಸ್ಲಿಂ ನಾಯಕರು, ಕಮ್ಯುನಿಸ್ಟರು, ಜೆಡಿಎಸ್, ಅಖೀಲ ಭಾರತ ಸೂಫಿ ಸಂತರು ಸಹ ಪಿಎಫ್‌ಐ ನಿರ್ಬಂಧಿಸಬೇಕೆಂದು ಆಗ್ರಹಿಸಿದ್ದು, ದೇಶದ ಸುರಕ್ಷತೆ ಹಾಗೂ ಹಿಂದೂಗಳ ಭದ್ರತೆಗಾಗಿ ಎರಡೂ ಸಂಘಟನೆಗಳನ್ನು ತಕ್ಷಣ ನಿಷೇಧಿಸುವಂತೆ ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಅಂಬ್ರೇಷ್ ತಡಿಬಿಡಿ, ತಾಲೂಕು ಅಧ್ಯಕ್ಷ ಸಂದೀಪ ಮಹೇಂದ್ರಕರ್, ನಗರಾಧ್ಯಕ್ಷ ಹಣಮಂತ್ರಾಯ ಪಾಟೀಲ್, ಮಲ್ಲಿಕಾರ್ಜುನ ವರ್ಕನಳ್ಳಿ, ವಿಶ್ವ ಹಕಿಮ್, ರಘುರಾಮ್, ರಾಕೇಶ ನಾಯಕ, ಅನಿಲ್ ಸಾಹು, ಬಸವರಾಜ ಜಡಿ, ಆಕಾಶ, ಮನೋಹರ ಕಲುºರ್ಗಿ ಇತರರಿದ್ದರು.