ಚನ್ನರಾಯಪಟ್ಟಣ: ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿರ್ವಾಹಕರು ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಬಸ್ ಹತ್ತಲು ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆ ಮುಖಂಡರು ಪ್ರತಿ ಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿದ್ರೆ ಕಾವಲ್ ಮಹೇಶ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ ಹತ್ತಲು ಹೋದರೆ ಅಸಡ್ಡೆಯಿಂದ ಕಾಣುತ್ತಾ ರೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜತೆಗೆ ಚಾಲಕರು ಹಾಗೂ ನಿರ್ವಾಹಕರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಖಾಸಗಿ ವಾಹನಗಳ ಹಾವಳಿ ಯಿಂದ ಹೆಣ್ಣು ಮಕ್ಕಳು, ಹೆಂಗಸರಿಗೆ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಬಸ್ ಹತ್ತಲು ಹೋದರೆ ನಿರ್ವಾಹಕರು ಮಕ್ಕಳ ಮೇಲೆ ದುರ್ವತನೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಶಿಸ್ತು ಕ್ರಮಕ್ಕೆ ಆಗ್ರಹ: ರೈತ ಸಂಘದ ತಾಲೂಕು ಅಧ್ಯಕ್ಷ ರವಿಗೌಡಯ್ಯ ಧರಣಿ ಉದ್ದೇಶಿಸಿ ಮಾತನಾಡಿ, ಬೆಂಗಳೂರು ಮತ್ತು ಹಾಸನ ಕಡೆಗೆ ಹೋಗಲು ಚನ್ನರಾಯಪಟ್ಟಣ ಬಸ್ ಡಿಪೋಗೆ ಬ ರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಬಸ್ಸುಗಳಿಗೆ ವಿದ್ಯಾರ್ಥಿಗಳು ಹತ್ತಲು ಹೋ ದರೆ ಬೇಕಾ ಬಿಟ್ಟಿ ಮಾತನಾಡಿ ಪ್ರಯಣಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ವ್ಯವಸ್ಥಾಪ ಕರು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಸ್ಪಂದಿಸದ ಡಿಪೋ ವ್ಯವಸ್ಥಾಪಕರು: ಬೆಂಗಳೂರು ಮತ್ತು ಹಾಸನಕ್ಕೆ ಹೋಗುವ ಬಸ್‌ಗಳು ಫ್ಲೈಓವರ್ ಮೇಲೆ ಹೋಗುತ್ತಿರು ವುದರಿಂದ ಶೆಟ್ಟಿಹಳ್ಳಿ, ಮಟ್ಟನವಿಲೆ, ಹಿರೀಸಾವೆ ಕಡೆಗೆ ಹೋಗುವ ಮಕ್ಕಳಿಗೆ ಮತ್ತು ಹಾಸನದ ಕಡೆಗೆ ಹೋಗುವ ಉದಯಪುರದಲ್ಲಿ ಬಸ್ಸು ಹತ್ತುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಯಾಗುತ್ತಿದೆ. ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
Related Articles
ಪರೀಕ್ಷೆ ಹೆಚ್ಚುವರಿ ಬಸ್ ಸೇವೆಗೆ ಆಗ್ರಹ: ಭೂಮಿ ಕ್ಷೇಮಾಭಿವೃದ್ಧಿ ಸಂಘದ ಮುಖ್ಯಸ್ಥ ರಾಜ್‌ಕುಮಾರ್ ಮಾತನಾಡಿ, ರಾಜಕೀಯ ಕಾರ್ಯಕ್ರಮಗಳಿಗೆ ಹೆಚ್ಚು ಬಸ್‌ಗಳನ್ನು ಪರೀಕ್ಷೆ ವೇಳೆಯಲ್ಲಿ ನೀಡಬಾರದು. ರಾಜಕೀಯ ಸಮಾವೇಶಕ್ಕೆ ಬಸ್ ನೀಡಿದರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಹಾಗೂ ಪರೀಕ್ಷೆಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕೆಎಸ್‌ಆರ್ ಟಿಸಿ ಆಯುಕ್ತರು ಇತ್ತ ಗಮನ ಹರಿಸಬೆಕು ಎಂದು ಆಗ್ರಹಿಸಿದರು.
ಕ್ರಮ ಕೈಗೊಳ್ಳುವ ಭರವಸೆ: ಪಟ್ಟಣ ಡಿಪೋ ವ್ಯವಸ್ಥಾಪಕಿ ಶಾಜೀಯಾ ಭಾನು ಮನವಿ ಪತ್ರ ಸ್ವೀಕರಿಸಿ ಮಾತ ನಾಡಿ, ಮೇಲಾಧಿಕಾರಿಗಳ ಸಲಹೆ ಪಡೆದು ಶುಕ್ರವಾರದೊಳಗೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ. ವಿದ್ಯಾರ್ಥಿ ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಫ್ಲೈ ಓವರ್ ಮೇಲೆ ಸಂಚಾರ ಮಾಡುವ ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ನೋಟಿಸ್ ನೀಡಲಾಗುವುದು ಭರವಸೆ ನೀಡಿದ ಮೇಲೆ ಧರಣಿ ಹಿಂಪಡೆದರು.
ಕುರುನಾಡು ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಗಿರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ, ಭೂಮಿ ಕ್ಷೇಮಾಭೀವೃದ್ಧಿ ಸಂಘದ ಅಧ್ಯಕ್ಷ ನಾಗರಾಜು, ರಮೇಶ್, ಸೋಮ ಶೇಖರ್, ಪ್ರಕಾಶ್‌ಕೋಟೆ, ಶಂಕರೇ ಗೌಡ, ಕುಮಾರ್, ತಾಂಡವೇಶ್, ಸ್ವಾಮಿ, ನಂಜುಂ ಡಪ್ಪ, ತಮ್ಮಯ್ಯ, ರಂಗಸ್ವಾಮಿ, ಚನ್ನೇಗೌಡ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.