Advertisement

ಚುನಾವಣಾ ವ್ಯವಸ್ಥೆ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ

02:32 PM Apr 24, 2019 | Suhan S |

ರಾಮನಗರ: ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು. ಈಗಾಗಲೇ ನಡೆದಿರುವ ಲೋಕಸಭೆ ಚುನವಣೆಯನ್ನು ರುದ್ದುಪಡಿಸಿ ಪ್ರಾಮಾಣಿಕ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Advertisement

ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಚುನಾವಣೆಗಳು ಪ್ರಾಮಾಣಿಕವಾಗಿ ನಡೆದಿಲ್ಲ. ಚುನಾವಣಾ ವೆಚ್ಚ ಎಂದು ಪ್ರತಿ ಅಭ್ಯರ್ಥಿಗೆ 70 ಲಕ್ಷ ರೂ. ನಿಗದಿ ಮಾಡಿರುವ ಕ್ರಮವೇ ಸರಿಯಲ್ಲ. 70 ಲಕ್ಷ ರೂ. ವೆಚ್ಚ ಜನಸಾಮಾನ್ಯರು ವ್ಯಯಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. 25 ಸಾವಿರ ರೂ. ಠೇವಣಿಯನ್ನು ಇಡಲು ಸಾಧ್ಯವಿಲ್ಲ ಎಂದರು.

ದೇವರ ಮುಂದೆ ಪ್ರಮಾಣ ಮಾಡಲಿ: ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀಮಂತ ಅಭ್ಯರ್ಥಿಗಳು ತಲಾ 50 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಅನೇಕರು ದೇವಾಲಯಗಳನ್ನು ಸುತ್ತಿದ್ದಾರೆ. ಅವರು ಕೇವಲ 70 ಲಕ್ಷ ರೂ. ಮಾತ್ರ ವೆಚ್ಚ ಮಾಡಿರುವುದಾಗಿ ಅವರು ನಂಬಿರುವ ದೇವರ ಮುಂದೆಯೇ ಪ್ರಮಾಣ ಮಾಡಲಿ ಎಂದು ಸವಾಲು ಎಸೆದರು. 28 ಕ್ಷೇತ್ರಗಳಲ್ಲಿ ಕನಿಷ್ಠ 4 ಸಾವಿರ ಕೋಟಿ ರೂ. ವೆಚ್ಚವಾಗಿದೆ ಎಂದು ಗಮನ ಸೆಳೆದರು.

ಮತದಾನದ ದಿನ ಮತಗಟ್ಟೆಗಳ ಬಳಿ ಪಕ್ಷಗಳ, ಅಭ್ಯರ್ಥಿಗಳ ಟೇಬಲ್ಗಳು ಬೇಕಾಗಿಲ್ಲ. ಯಾವ ಚಿಹ್ನೆಯೂ ಕಾಣಬಾರದು. ಮನೆ ಮನೆ ಪ್ರಚಾರವನ್ನು ತಡೆಯಬೇಕು. ಮತದಾರರ ಚೀಟಿಯನ್ನು ಕಡ್ಡಾಯವಾಗಿ ಆಯೋಗವೇ ವಿತರಿಸಬೇಕು. ಕಡ್ಡಾಯ ಮತದಾನ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಜನ ಸಾಮಾನ್ಯರು ಸ್ಪರ್ಧಿಸುವಂತಾಗಲಿ: ಚುನಾವಣೆಯಲ್ಲಿ ಜನಸಾಮಾನ್ಯರು ಸ್ಪರ್ಧಿಸುವಂತಾಗಬೇಕು, 25 ಸಾವಿರ ಠೇವಣಿ ಶ್ರೀಮಂತರು ಮಾತ್ರ ಕೊಡಲು ಸಾಧ್ಯ ಎಂಬುದನ್ನು ಆಯೋಗ ಮನಗಾಣಬೇಕು ಎಂದರು.

Advertisement

ಮತದಾನದ ಸಮಯ ಕನಿಷ್ಟ 2 ದಿನಗಳಿಗೆ ವಿಸ್ತರಣೆ ಆಗಬೇಕು. ಪ್ರಮಾಣಿಕವಾಗಿ ಮತ್ತೂಮ್ಮೆ ಚುನಾವಣೆ ನಡೆಯಬೇಕು. ಚುನಾವಣೆ ವ್ಯವಸ್ಥೆ ಸಮಗ್ರವಾಗಿ ಬದಲಾಗಬೇಕು. ಪಕ್ಷಾಂತರಿಗಳನ್ನು ಜೈಲಿಗೆ ಕಳುಹಿಸಬೇಕು. ಜತೆಗೆ ಮತ್ತೂಮ್ಮೆ ಚುನಾವಣೆಗೆ ಸ್ಪರ್ಧಿಸದಂತೆ ನೀತಿ ಜಾರಿಗೊಳ್ಳಬೇಕು. ಆಮಿಷಕ್ಕೆ ಒಳಗಾಗುವ ಮತದಾರನಿಗೂ ಜೈಲು ಶಿಕ್ಷೆಯಾಗಬೇಕುರ ಎಂದು ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next