Advertisement

ಅಕ್ಷರ ಜಾತ್ರೆಗೆ ವಿರೋಧ : ಪ್ರತಿಭಟನೆ

12:45 PM Jan 10, 2020 | Suhan S |

ಚಿಕ್ಕಮಗಳೂರು : 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ವಿವಾದ ಪರಿಣಾಮವಾಗಿ ಅನುಮತಿ ಇಲ್ಲದೇ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಆಕ್ಷೇಪದ ಹಿನ್ನಲೆಯಲ್ಲಿ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ಅವರನ್ನು ಹೆಗ್ಡೆ ವಿರೋಧಿಸಿ ಶೃಂಗೇರಿ ಬಸ್ ನಿಲ್ದಾಣ ದ ಬಳಿ ನಕ್ಸಲ್ ವಿರೋಧಿ ಸಮಿತಿಯಿಂದ ಪ್ರತಿಭಟನೆಗೆ ಸಜ್ಜು ಆದ ಕಾರಣ ಪೊಲೀಸರು ಭಿಗಿ ಬಂಧೋಬಸ್ತ್ ನಡೆಸಿದ್ದಾರೆ.

Advertisement

ಪ್ರತಿಭಟನಾಕಾರರು ಕೂಡಲೇ ಸಮ್ಮೇಳನ ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ.  ನಕ್ಸಲ್ ವಿರೋಧಿ ಹೋರಾಟ ಸಮಿತಿ, ಸಾಹಿತ್ಯ ಪರಿಷತ್ ಉಳಿಸಿ ಸಮಿತಿ ಹಾಗೂ ವಿವಿಧ ಸಂಘಟನೆಗಳು ಅಕ್ಷರ ಜಾತ್ರೆಗೆ ವಿರೋಧ ಹಿನ್ನೆಲೆ  ಪಟ್ಟಣವನ್ನು ಬಂದ್ ಮಾಡಿದೆ. ಶೃಂಗೇರಿಯಲ್ಲಿ 800ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲು ನಿರತವಾಗಿದೆ.

16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ  ವೇದಿಕೆ ಆಗಮಿಸಿದ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠ್ಠಲ್ ಹೆಗ್ಡೆ ದಂಪತಿ ಸಮೇತ ವೇದಿಕೆಗೆ  ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಸಾಹಿತಿ ಕುಂ.ವೀರಭದ್ರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪ್ರಾಸ್ತಾವಿಕ ನುಡಿ ಆರಂಭಿಸಿದ ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್  ಸಡಗರದಿಂದ ಕಾರ್ಯಕ್ರಮ ನಡೆಯುತ್ತದೆ ನನಗೆ ತುಂಬಾ ಖುಷಿಯಾಗ್ತಿದೆ ಕನ್ನಡ ಜಾತ್ರೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಶಾರದಾ ಸನ್ನಿಧಿಯಲ್ಲಿ ಕನ್ನಡ ಜಾತ್ರೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next