Advertisement

ರೈತರಿಗೆ ಮಾರಕವಾಗುವ ಯೋಜನೆ ಕೈಬಿಡಲು ಒತ್ತಾಯ

06:43 PM Oct 17, 2020 | Suhan S |

ಎನ್‌. ಆರ್‌. ಪುರ: ರೈತರಿಗೆ ಮಾರಕವಾಗುವ ಯೋಜನೆಗಳನ್ನು ಸರ್ಕಾರ ಕೈಬಿಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಮಲೆನಾಡು ರೈತ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ರತ್ನಾಕರ್‌ ತಿಳಿಸಿದರು.

Advertisement

ಮಲೆನಾಡು ರೈತ ಹಿತರಕ್ಷಣಾ ಸಮಿಯಿಂದಭದ್ರಾಹುಲಿ ಯೋಜನೆ, ಬಫರ್‌ ಝೋನ್‌, ಪರಿಸರ ಸೂಕ್ಷ್ಮ ವಲಯ , ಮೀಸಲು ಅರಣ್ಯ ಪ್ರಸ್ತಾವನೆ , ಕಸ್ತೂರಿ ರಂಗನ್‌ ವರದಿ ವಿರೋಧಿ ಸಿ ಕರೆಯಲಾಗಿದ್ದ ತಾಲೂಕು ಬಂದ್‌ ವೇಳೆ ಇಲ್ಲಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿಗೆ 1900 ವರ್ಷಗಳ ಇತಿಹಾಸವಿದೆ. ಕೃಷಿಯನ್ನೆ ನಂಬಿಕೊಂಡು ಬಂದಿರುವ ಶ್ರೇಷ್ಠ ನೆಲ ನಮ್ಮದು. ಮಲೆನಾಡಿನ ಭಾಗದಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣ, ಭದ್ರಾ ಮೇಲ್ದಂಡೆ ಯೋಜನೆ, ಭದ್ರಾಹುಲಿ ಯೋಜನೆ ಅನುಷ್ಠಾನವಾದಾಗಲೂ ತಾಲೂಕಿನ ರೈತರುಶಾಂತಿಯಿಂದ ಇದ್ದರು. ಈ ಭಾಗದ ಜನರು ಕೈಗಾರಿಕೆ ಸ್ಥಾಪನೆ, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಬೇಕೆಂಬ ಬೇಡಿಕೆ ಇಟ್ಟಿಲ್ಲ. ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಕೃಷಿ ಭೂಮಿ ಉಳಿಸಿಕೊಡಬೇಕೆಂಬುದರ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಈ ಭಾಗದಲ್ಲಿ ಜಾರಿಯಾಗುತ್ತಿರುವ ಅರಣ್ಯ ಕಾಯ್ದೆಗಳು ಜನರೊಂದಿಗೆ ಚರ್ಚಿಸಿ ಜಾರಿಗೊಳಿಸದೆ ಉಪಗ್ರಹ ಆಧಾರಿತ ಸಮೀಕ್ಷೆ ಮೂಲಕ ರೂಪಿಸಲಾಗುತ್ತಿದೆ. ರೈತರು ತುಂಡು ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮಾತನಾಡಿ, ಮಲೆನಾಡಿನ ಭಾಗದ ಕುಗ್ರಾಮಗಳಲ್ಲಿ ವಾಸ ಮಾಡುತ್ತಿರುವರೈತರ ಮೇಲೆ ಅರಣ್ಯ ಇಲಾಖೆಯಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ರೈತರು ನೀಡಿದ ಮತದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಹ ಗ್ರಾಮಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. 39 ಹುಲಿಗಳ ರಕ್ಷಣೆಗಾಗಿ ಸಾವಿರಾರು ರೈತರ ಬದುಕನ್ನು ನಾಶಮಾಡುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಮುತ್ತಿನಕೊಪ್ಪ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಎಲ್‌.ಮನೋಹರ್‌ ಮಾತನಾಡಿ, ಜನಪ್ರತಿನಿಧಿ  ಗಳ ಗಮನಕ್ಕೆ ತರದೆ ಸರ್ಕಾರ ಯಾವುದೇ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಅರಣ್ಯ ಇಲಾಖೆಯವರಲ್ಲ. ಜನರಿಂದ ಚುನಾಯಿತವಾದಸರ್ಕಾರ. ಜನಪ್ರತಿನಿಧಿ ಗಳು ಜನಪರವಾಗಿದ್ದರೆ ಜನರು ಬೀದಿಗಿಳಿದು ಹೋರಾಟ ಮಾಡುವ ಅವಶ್ಯಕತೆಯಿರುತ್ತಿರಲಿಲ್ಲ. ರೈತರಿಗೆ ನ್ಯಾಯ ದೊರೆಯಬೇಕಾದರೆ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷ ನಿಯೋಗತೆರಳಿ ಯೋಜನೆ ಕೈಬಿಡುವಂತೆ ಒತ್ತಾಯಿಸಬೇಕು ಎಂದರು.

Advertisement

ಜಿಪಂ ಮಾಜಿ ಸದಸ್ಯ ಪಿ.ಜೆ. ಅಂಟೋಣಿಮಾತನಾಡಿ, ಯಾವುದೇ ಸರ್ಕಾರರೈತಪರವಾಗಿಲ್ಲ. ಜನಪ್ರತಿನಿಧಿ ಗಳು ರೈತರ ಸಮಸ್ಯೆ ಪ್ರಸ್ತಾಪಿಸಿದರೂ ಸರ್ಕಾರಗಳು ಕೇಳುವ ಸ್ಥಿತಿಯಲ್ಲಿಲ್ಲ. ಪ್ರಾಣಿಗಳಿಗೆ ನೀಡುವ ಆದ್ಯತೆ ಮಾನವನಿಗೆ ನೀಡದ ಸ್ಥಿತಿ ನಿರ್ಮಾಣವಾಗಿದೆ. ಮೀಸಲು ಅರಣ್ಯ ಘೋಷಣೆಗೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಜನರೊಂದಿಗೆ ಚರ್ಚಿಸುತ್ತಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಾ| ಕೆ.ಪಿ.ಅಂಶುಮಂತ್‌ ಮಾತನಾಡಿ, ಈ ಭಾಗದ ರೈತರ ಮತ್ತು ಜನರ ಬದುಕಿಗೆ ಮಾರಕವಾಗಿರುವ ಕರಾಳ ಶಾಸನದ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತುವ ಮೂಲಕ ನೆಮ್ಮದಿಯ ಬದುಕು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದರು.

ಜಿಪಂ ಸದಸ್ಯ ಪಿ.ಆರ್‌. ಸದಾಶಿವ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್‌ ಕುಮಾರ್‌, ವಕೀಲ ಚಂದ್ರಶೇಖರ್‌, ತಾಲೂಕು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್‌, ರಾಜ್ಯ ಕಿಸಾನ್‌ ಘಟಕದ ಅಧ್ಯಕ್ಷ ಸಚ್ಚಿನ್‌ ಮೀಗಾ ಮಾತನಾಡಿದರು. ಮಲೆನಾಡು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್‌. ನಾಗೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next