Advertisement

ಲಿಂಗಾಯಿತ ಮಹಾಸಭಾದಿಂದ ಪ್ರತಿಭಟನೆ

12:11 PM Jun 05, 2022 | Team Udayavani |

ಕಲಬುರಗಿ: ರಾಜ್ಯ ಸರಕಾರದ ಪಠ್ಯ ಪುಸ್ತಕ ರಚನಾ ಸಮಿತಿ 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನ ಕುರಿತು ತಪ್ಪು ಮಾಹಿತಿಗಳನ್ನು ಮುದ್ರಿಸಿ ಮಕ್ಕಳಿಗೆ ನೀಡಿದೆ. ಕೂಡಲೇ ತಪ್ಪು ಮಾಹಿತಿ ಸರಿ ಮಾಡಬೇಕು ಎಂದು ಒತ್ತಾಯಿಸಿ ಜಾಗತಿಕ ಲಿಂಗಾಯಿತ್‌ ಮಹಾಸಭಾದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪತ್ರಿಭಟನೆ ಮಾಡಿದರು.

Advertisement

ಬಳಿಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪಠ್ಯದಲ್ಲಿ ಬಸವಣ್ಣನವರು ಉಪನಯನವಾದ ಬಳಿಕ ಕೂಡಲ ಸಂಗಮಕ್ಕೆ ನಡೆದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು.

ವೀರಶೈವ ಮತ ಅಭಿವೃದ್ಧಿ ಪಡಿಸಿದರು ಎಂಬ ಅಂಶಗಳು ಅನೈತಿಹಾಸಿಕವಾಗಿವೆ. ಅವುಗಳನ್ನು ಸರಿಪಡಿಸಿ ಮಕ್ಕಳಿಗೆ ಸರಿಯಾದ ಪಠ್ಯಪುಸ್ತಕ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಲಾಯಿತು.

ಜಿಲ್ಲಾಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌,ಆರ್‌.ಜಿ ಶೆಟಗಾರ, ರವೀಂದ್ರ ಶಾಬಾದಿ, ಆರ್‌.ಕೆ ಹುಡಗಿ, ಶರಣು ಪಪ್ಪಾ, ರೇಣುಕಾ ಸರಡಗಿ, ರವಿ ಸಿರಸಗಿ, ಡಾ| ಮಲ್ಲಿಕಾರ್ಜುನ, ಶಾಂತಪ್ಪಾ ಪಾಟೀಲ, ಶರಣ ಐಟಿ ಹಾಗೂ ಬಸವಾಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next