Advertisement

ಕುರುಬರ ಸಮಾಜದಿಂದ ಪ್ರತಿಭಟನೆ

04:20 PM Dec 22, 2021 | Team Udayavani |

ಸಿಂಧನೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸ ಮಾಡಿ, ನಾಡಧ್ವಜ ಸುಟ್ಟು ಹಾಕಿರುವ ಘಟನೆ ಖಂಡಿಸಿ ತಾಲೂಕು ಕುರುಬರ ಸಂಘದಿಂದ ಮಂಗಳವಾರ ಬೃಹತ್‌ ಪ್ರತಿಭಟನೆಯ ನಡೆಯಿತು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಾಜದ ತಾಲೂಕಾಧ್ಯಕ್ಷ ಪೂಜಪ್ಪ ಪೂಜಾರಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸ ಮಾಡಿ, ನಾಡಧ್ವಜ ಸುಟ್ಟು ಹಾಕಿರುವ ಎಂಇಎಸ್‌ ಪುಂಡರ ವಿರುದ್ಧ ನಮ್ಮ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ದಾರ್ಶನಿಕರ ಭಾವಚಿತ್ರ, ಪುತ್ಥಳಿ ಧ್ವಂಸ ಮಾಡುವದು ಸರಿಯಲ್ಲ. ಇದು ಹೇಡಿಗಳ ಕೃತ್ಯ. ಸರಕಾರ ರಾಜ್ಯದಲ್ಲಿ ಎಂಎಎಸ್‌ ಸಂಘಟನೆ ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜದ ಗುರುಗಳಾದ ನಂಜುಂಡಯ್ಯ ಗುರುವಿನ್‌, ಮಾದಯ್ಯ ಗುರುವಿನ್‌, ಬೀರಪ್ಪ ಪೂಜಾರಿ, ಪಿಕಾರ್ಡ ಬ್ಯಾಂಕ್‌ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭಾ ಸದಸ್ಯರಾದ ಕೆ.ರಾಜಶೇಖರ್‌, ಚಂದ್ರು ಮೈಲರ್‌, ಮುಖಂಡರಾದ ವೆಂಕೋಬಣ್ಣ ಸಾಸಲಮರಿ, ಸುರೇಶ್‌ ಹಚ್ಚೊಳ್ಳಿ, ದುರುಗಪ್ಪ ಕಟಾಲಿ, ರಾಮಣ್ಣ ಮಾವಿನಮಡಗು, ಪಕ್ಕೀರಪ್ಪ, ಶರಣಪ್ಪ ಚನಳ್ಳಿ, ವೆಂಕಟೇಶ್‌ ಭಂಗಿ, ಗದ್ದೆಪ್ಪ, ವೆಂಕಟೇಶ್‌ ಬಾದರ್ಲಿ, ವಸಂತ್‌ ಕುಮಾರ್‌ ಭಂಗಿ, ಸುರೇಶ್‌ ಸಿದ್ದಾಪುರ, ಶಿವರಾಜ್‌ ಬಿಂಗಿ, ಟಿ.ಶಿವು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next