ಬಳ್ಳಾರಿ: ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿಯಿಂದ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಪ್ರತಿಭಟಿಸುವ ಮೂಲಕ ಶನಿವಾರ ಧಿಕ್ಕಾರ ದಿನ ಆಚರಿಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿಕಾಯ್ದೆಗಳನ್ನು ರದ್ದುಗೊಳಿಸಬೇಕು. ಕಾರ್ಪೋರೇಟ್ ಮಾಲೀಕರ ಪರವಾದ ಕಾನೂನನ್ನು ರದ್ದುಮಾಡಬೇಕು. ಅಂಬಾನಿ-ಅದಾನಿಗಳ ಏಜೆಂಟ್ ಮೋದಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರೈತ ವಿರೋಧಿ ಕಾಯ್ದೆಗಳ ಪ್ರತಿಕೃತಿಯನ್ನು ದಹಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಇ.ಹನುಮಂತಪ್ಪ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಕೇವಲ ಪಂಜಾಬ್-ಹರಿಯಾಣದ ರೈತರದಷ್ಟೆ ಅಲ್ಲದೆಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ,ಬಿಹಾರ್ ಮುಂತಾದ ರಾಜ್ಯಗಳಿಂದಲ್ಲದೆ,ದಕ್ಷಿಣ ಭಾರತದ ರಾಜ್ಯಗಳಿಂದಲೂ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ದಿನ ದಿನಕ್ಕೆ ರೈತರ ಸಂಖ್ಯೆ ಏರುತ್ತಲೇ ಇದ್ದು, 2 ಕೋಟಿಯನ್ನೂ ದಾಟಿದೆ. ಭಾರತದ ಇತಿಹಾಸದಲ್ಲೇ ಇದೊಂದುಅಭೂತಪೂರ್ವ ಹೋರಾಟವಾಗಿದೆ. ಕೊರೆಯುವ ಚಳಿಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತರೈತರು ದೆಹಲಿಯತ್ತ ಮುನ್ನಗ್ಗುತ್ತಿದ್ದಾರೆ. ಕಾರ್ಮಿಕಸಂಘಟನೆಗಳು, ವಿರೋಧ ಪಕ್ಷಗಳು, ಹಲವಾರುವಿದ್ಯಾರ್ಥಿ-ಯುವಜನ-ಮಹಿಳಾ ಸಂಘಟನೆಗಳುಸಹ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವ್ಯಕ್ತಪಡಿಸಿವೆ ಎಂದರು.
ಇದು ಕೇವಲ ರೈತರ ಹೋರಾವಷ್ಟೆ ಅಲ್ಲದೆ ಶೋಷಿತ ಜನತೆಯಹೋರಾಟವಾಗಿ ರೂಪುಗೊಳ್ಳುತ್ತಿದೆ. ಇಷ್ಟಾಗಿಯೂಮೋದಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನುಹಿಂಪಡೆಯಲು ಹಗ್ಗ-ಜಗ್ಗಾಟ ನಡೆಸಿದೆ. ಕಾರ್ಪೋರೇಟ್ ಮಾಲೀಕರ ಪರವಾಗಿರುವ ಮೋದಿಸರ್ಕಾರ, ಈ ಕಾಯ್ದೆಗಳನ್ನು ರದ್ದು ಮಾಡಲು ಮುಂದಾಗುತ್ತಿಲ್ಲ. ಬದಲಿಗೆ ರೈತರ ಹೋರಾಟಕ್ಕೆಮಸಿ ಬಳಿಯುವ, ಅಪಚಾರ ಎಸಗುವ ಹೀನ ಕೈತ್ಯಕ್ಕೆಕೈಹಾಕಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಜ್ಞಾವಂತಜನತೆ ಕೇಂದ್ರ ಬಿಜೆಪಿ ಸರ್ಕಾರದ ಕುತಂತ್ರಗಳನ್ನುಸೋಲಿಸಿ, ರೈತರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟವನ್ನುತೀವ್ರಗೊಳಿಸಬೇಕಿದೆ. ಒಗ್ಗಟ್ಟಿನ ಹೋರಾಟದಮೂಲಕ ಮಾತ್ರವೇ ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರ್ಕಾರದ ಜನ ವಿರೋಧಿ , ರೈತ ವಿರೋಧಿ ನೀತಿಗಳನ್ನು ಸೋಲಿಸಲು ಸಾಧ್ಯ ಎಂದರು.
ಸಂಘಟನೆಯ ಮುಖಂಡರುಗಳಾದಗೋವಿಂದ್, ಶ್ರೀಧರಗಡ್ಡೆ ಗ್ರಾಮದ ಮುಖಂಡರಾದ ಬಾಬು, ಮಲ್ಲಿ, ತಿಮ್ಮಯ್ಯ, ಆಂಜಿನೇಯ, ಭೀಮ, ಹೊನ್ನೂರಸ್ವಾಮಿ, ಮಂಕಾಳಪ್ಪ, ಮಲ್ಲಣ್ಣ, ಮಧು ಹಾಗೂ ಇನ್ನಿತರ ರೈತರು ಇದ್ದರು.