ಚಿಂಚೋಳಿ: ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಆರೋಪಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರಕಾರವು ಸುಳ್ಳು ಕೇಸಿನಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರನ್ನು ಸಿಲುಕಿಸುವ ಸಂಚು ರೂಪಿಸಿದೆ. ಪ್ರತಿಪಕ್ಷಗಳ ಧ್ವನಿ ಹತ್ತಿಕ್ಕಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಸವರಾಜ ಮಲಿ, ಸೈಯ್ಯದ್ ಮಹಮೂದ್ ಪಟೇಲ ಸಾಸರಗಾಂವ, ಶರಣು ಪಾಟೀಲ, ಸಂತೋಷ ಗುತ್ತೆದಾರ, ಅಬ್ದುಲ್ ಬಾಶೀತ, ಅನಿಲಕುಮಾರ ಜಮಾದಾರ, ರವಿರಾಜ ಕೊರವಿ, ಅನಿಲ ಕಟ್ಟಿ ಮಾತನಾಡಿದರು.
ಪ್ರವೀಣಕುಮಾರ ತೇಗಲತಿಪ್ಪಿ, ವಿಜಯಕುಮಾರ ಮಾನಕರ, ವೀರಮ್ಮ ಅಣವಾರ,ನಾಗಮಣಿ ಮರಪಳ್ಳಿ, ಪುರಸಭೆ ಉಪಾಧ್ಯಕ್ಷ ಶಬ್ಬೀರ ಅಹಮದ್, ಅನ್ವರ ಖತೀಬ್, ಗೋಪಾಲ ಜಾಧವ್, ವಿಠಲ ಚವ್ಹಾಣ, ಅಂಬರೀಶ ಗೋಣಿ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಕೋಟಪಳ್ಳಿ, ಸುನೀಲ ದೊಡ್ಡಮನಿ, ಚಂದು ಗುತ್ತೆದಾರ, ವಿಜಯಕುಮಾರ ಘಾಟಗೆ, ಗಂಗಾಧರ, ಚಾಂದ, ಶಬ್ಬೀರ ಕೊಡ್ಲಿ, ಬಸವರಾಜ ಕೋಲಕುಂದಿ ಪ್ರತಿಭಟನೆಯಲ್ಲಿ ಇದ್ದರು.