Advertisement
ಗ್ರಾಮ ಪಂಚಾಯತ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಸರ್ಕಾರದ ಹಲವಾರು ಯೋಜನೆಗಳನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ಜಾರಿ ಮಾಡುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳಿಗೆ ನೇಮಕಾತಿ ಆದೇಶ ನೀಡಿ ಕಾಯಂಗೊಳಿಸಬೇಕು. ನೇಮಕಾತಿಗಾಗಿ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. 2006-07 ರಲ್ಲಿ ಜಾರಿಗೆ ಬಂದಿರುವ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯತಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಸರ್ಕಾರದ ಅನೇಕ ಯೋಜನೆಗಳನ್ನು ಸಮಪರ್ಕವಾಗಿ ಜಾರಿ ಮಾಡುತ್ತಿರುವ ಕಂಪ್ಯೂಟರ್ ಆಪರೇಟರುಗಳಿಗೆ ಕನಿಷ್ಠ ವೇತನ ಇಲ್ಲ. 2014ರ ಆದೇಶದನ್ವಯ ಅನುಮೋದನೆ ನೀಡಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಸಂಘದ ಜಿಲ್ಲಾ ಗೌರವ ಅಧ್ಯಕ್ಷ ವಿ. ಪಿ. ಕುಲಕರ್ಣಿ ಒತ್ತಾಯಿಸಿದರು.
Advertisement
ಕಂಪ್ಯೂಟರ್ ಆಪರೇಟರ್‌ಗಳ ಪ್ರತಿಭಟನೆ
03:12 PM Dec 27, 2019 | Suhan S |
Advertisement
Udayavani is now on Telegram. Click here to join our channel and stay updated with the latest news.