Advertisement

ಬೃಹತ್ ಪ್ರತಿಭಟನೆ: ಯತ್ನಾಳ್-ಕಾಶಪ್ಪನವರ ವಿರುದ್ದ ಗುಡುಗಿದ ಬಣಜಿಗರು

10:21 PM Nov 16, 2022 | Team Udayavani |

ಮಹಾಲಿಂಗಪುರ : ಬಣಜಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಬಣಜಿಗ ಸಮಾಜದಲ್ಲಿ ಒಡಕು ಮೂಡಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆಂದು ಆರೋಪಿಸಿ ಬುಧವಾರ ಪಟ್ಟಣದ ಬಣಜಿಗ ಸಮಾಜದವರು ಬೃಹತ್ ಪ್ರತಿಭಟನೆಯ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಗುಡುಗಿದರು.

Advertisement

ಟೋಣಪಿನಾಥ ಸಮಾಜದ ಹಿರಿಯರಾದ ಚಂದ್ರು ಗೊಂದಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಮಾತನಾಡಿ ಬಣಜಿಗ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಇಬ್ಬರ ವಿರುದ್ಧ ಹುನಗುಂದ ಮತ್ತು ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಮತದಾರರು ಮುಂಬರುವ ಚುನಾವಣೆಯಲ್ಲಿ ಅವರ ವಿರುದ್ಧ ಮತಚಲಾಯಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಮಹಾಲಿಂಗಪ್ಪ ಸಿ.ಕುಳ್ಳೋಳ್ಳಿ, ಗಿರೀಶ ಮುತ್ತೂರ, ಚನಬಸು ಹುರಕಡ್ಲಿ ಮಾತನಾಡಿ ಬಣಜಿಗ ಸಮಾಜವು ಬಸವಣ್ಣನ ಕಾಯಕ ತತ್ವದ ಅಡಿಯಲ್ಲಿ ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಮಾದರಿಯಾಗಿ ಬದುಕುತ್ತಿರುವ ಸಮಾಜವಾಗಿದ್ದು, ಇಂಥಹ ಸಮಾಜದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಇಬ್ಬರು ಮುಖಂಡರ ವಿರುದ್ದ ಸರ್ಕಾರವು ಕಾನೂನುಕ್ರಮವನ್ನು ಜರುಗಿಸಬೇಕು. ಬಣಜಿಗ ಸಮಾಜವು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಯ ಬಂದಾಗ ಇಂಥವರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದರು.
ಮಹಾದೇವಿ ಹುಕ್ಕೇರಿ, ಕಲ್ಪನಾ ಬರಗಿ ಮಾತನಾಡಿದರು. ಬುಧವಾರ ಪಟ್ಟಣದಲ್ಲಿ ಬಸವ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಡಬಲ್ ರಸ್ತೆ, ವಿವೇಕ ವೃತ್ತ, ನಡಚೌಕಿ, ಜವಳಿ ಬಜಾರ, ಗಾಂಧಿವೃತ್ತ, ಚನ್ನಮ್ಮ ವೃತ್ತ ಮಾರ್ಗವಾಗಿ ಪುರಸಭೆವರೆಗೆ ಬೃಹತ್ ಮೆರವಣಿಗೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಜೆ.ಎಸ್.ಈಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಇಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಮಾನವ ಸರಪಳಿ ಮೂಲಕ ಪ್ರತಿಭಟನೆ 

ಪಟ್ಟಣದ ಬಸವ ವೃತ್ತ ಮತ್ತು ಚನ್ನಮ್ಮ ವೃತ್ತಗಳಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಯತ್ನಾಳ ಮತ್ತು ಕಾಶಪ್ಪನವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು.

Advertisement

ಮಹಾಲಿಂಗಪ್ಪ ಅವರಾದಿ, ಬಸವರಾಜ ಘಟ್ನಟ್ಟಿ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಅಂಗಡಿ, ಬಸವರಾಜ ಪಶ್ಚಾಪೂರ, ಮಹಾದೇವಪ್ಪ ಬಂಡಿ, ಮಲ್ಲು ಕುಳ್ಳೋಳ್ಳಿ, ಚನ್ನಪ್ಪ ಡಿ.ಪಟ್ಟಣಶೆಟ್ಟಿ, ಕೇದಾರಿ ಹುರಕಡ್ಲಿ, ರಾಜು ಬರಗಿ, ಶಿವಾನಂದ ಪರಪ್ಪನವರ, ಚಂದಾ ಅಷ್ಟಗಿ, ಶಶಿಧರ ನಕಾತಿ, ಮಹಾಂತೇಶ ಘಟ್ನಟ್ಟಿ, ಸಿದ್ದು ಬೆನ್ನೂರ, ಪ್ರವೀಣ ಕುಳ್ಳೊಳ್ಳಿ, ಮಹಾಲಿಂಗಪ್ಪ ಹೊಸೂರ, ಮಹಾಲಿಂಗಪ್ಪ ಹಾವೇರಿ, ಸಂಜು ಅಂಗಡಿ, ರಮೇಶ ಹರಕಂಗಿ, ಸುರೇಶ ಬಂಡಿ, ಪ್ರಕಾಶ ಕೋರಿಶೆಟ್ಟಿ, ರವಿ ಬಂಡಿ, ಸಂಗಪ್ಪ ಲಿಗಾಡಿ, ಬಸವರಾಜ ಕಬ್ಬೂರ, ಬಸವರಾಜ ಕರೆಹೊನ್ನ, ಸಿದ್ದು ನಕಾತಿ, ನಳಿನಿ ಹಂಚಿನಾಳ, ವಿಜಯಲಕ್ಷ್ಮೀ ಕುಳ್ಳೋಳ್ಳಿ, ಸ್ನೇಹಲ್ ಅಂಗಡಿ, ಚಿನ್ನಮ್ಮ ಕುಳ್ಳೋಳ್ಳಿ, ರಂಜನಾ ವಜ್ಜರಮಟ್ಟಿ, ಲಕ್ಷ್ಮೀ ಅಂಗಡಿ ಸೇರಿದಂತೆ ರಬಕವಿ, ಬನಹಟ್ಟಿ, ತೇರದಾಳ, ಕುಳ್ಳೊಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next