Advertisement

ಮಸೀದಿ ಧರ್ಮ ಗುರುಗಳ ಮೇಲೆ ಹಲ್ಲೆ ಪ್ರಕರಣ : ಕಿಡಿಗೇಡಿಗಳ ಸೆರೆಗೆ ಒತ್ತಾಯ

02:09 PM Mar 27, 2021 | Team Udayavani |

ಸಕಲೇಶಪುರ: ಮಸೀದಿ ಧರ್ಮ ಗುರುಗಳ ಮೇಲೆ ಹಲ್ಲೆ ನಡೆಸಿರುವ ನಾಲ್ವರು ಕಿಡಿಗೇಡಿಗಳನ್ನು ಬಂಧಿಸದಿದ್ದಲ್ಲಿ ವಿಧಾನಸೌಧ, ಐಜಿ ಮನೆ ಎದುರು ಪ್ರತಿಭಟನೆನಡೆಸಲಾಗುವುದು ಎಂದು ಪ್ರಗತಿಪರ ನಾಯಕರು ಪೊಲೀಸರನ್ನು ಎಚ್ಚರಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು.

Advertisement

ಶುಕ್ರವಾರದ ನಮಾಜಿನ ನಂತರ ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರು ಶಾಂತಿಯುತವಾಗಿ ಮೌನ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು ತಾಲೂಕಿನ ಸುಂಡೆಕೆರೆ ಗ್ರಾಮದ ಮಸೀದಿ ಧರ್ಮಗುರು ಅಬ್ದುಲ್‌ನಾಸೀರ್‌ ದಾರಿಮಿ ಮೇಲೆ ನಾಲ್ವರು ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಮಾ.21ರ ಭಾನುವಾರ ಸಂಜೆ ನಡೆದಿದೆ.

ಸುಂಡೆಕೆರೆ ಗ್ರಾಮದ ಮಸೀದಿ ಸಮೀಪದ ಸಹೋದರಿಯ ಮನೆಯಿಂದಮಸೀದಿ ಕಡೆಗೆ ಕಾಲುನಡಿಗೆಯಲ್ಲಿ ಬರುತ್ತಿದ್ದಾಗ ನಾಲ್ವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರು ಬಿರಡಹಳ್ಳಿ ಹಾಗೂ ಸುತ್ತ ಮುತ್ತಲಿನನ ಗ್ರಾಮದ ನಾಲ್ಕು ಜನರು ಎಂದು ತಿಳಿದು ಬಂದಿದೆ.

ಕಿಡಿಗೇಡಿಗಳ ಮೇಲೆ ಪೊಲೀಸ್‌ ಇಲಾಖೆ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮ ಶ್ಲಾಘನೀಯವಾಗಿದೆ. ಆದರೆ ಕಿಡಿಗೇಡಿಗಳನ್ನು ಬಂಧಿಸಿದರೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಬಹುದಾಗಿದೆ. ಬಿರಡಹಳ್ಳಿಯಲ್ಲಿ ಈಹಿಂದೆಯೂ ಸಹ ಇಂತಹ ಅಹಿತಕರ ಪ್ರಕರಣ ನಡೆದಿತ್ತು.ಸುಂಡೆಕೆರೆಯಲ್ಲಿ ಕ್ರೈಸ್ತ ಮತದ ವ್ಯಕ್ತಿಯ ಮನೆ ಮುಂಭಾಗದ ಏಸು ಪ್ರತಿಮೆಯನ್ನು ಧ್ವಂಸ ಗೊಳಿಸಲಾಗಿತ್ತು.ಇತ್ತೀಚಿನ ಘಟನೆ ಅದರ ಮುಂದುವ ರಿದ ಭಾಗವಾಗಿದೆ. ಕೃತ್ಯ ನಡೆದು ಆರು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಸೋಮವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ವಿಧಾನಸೌಧ, ಐಜಿ ಕಚೇರಿಯ ಎದುರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮನೆ ಎದುರು ನ್ಯಾಯಕ್ಕಾಗಿಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

Advertisement

ಜನ ಕೋವಿಡ್ ಸಾಂಕ್ರಮಿಕ ರೋಗದ ಮಧ್ಯೆ ನೆಮ್ಮದಿಯಾಗಿ ಬದುಕಲು ಮುಂದಾಗಿದ್ದಾರೆ. ಆರ್ಥಿಕ ಸಂಕಷ್ಟದ ಬದುಕನ್ನು ಮೂರಾಬಟ್ಟೆ ಮಾಡಿದೆ. ನಮ್ಮ ಮುಂದೆಅನೇಕ ಸವಾಲುಗಳಿದ್ದು ಅದನ್ನು ಎದುರಿಸಿ ಬದುಕಬೇಕಾಗಿದೆ.ಇಲ್ಲಿಯ ಶಾಂತಿ ಕದಡಲು ಕೆಲವು ಸಂಘಟನೆಗಳು ಮತ್ತುವ್ಯಕ್ತಿಗಳು ಮುಂದಾಗಿದ್ದಾರೆ. ಹಲ್ಲೆ ನಡೆಸಿರುವ ವ್ಯಕ್ತಿಗಳುಹಾಗೂ ಇವರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳ ವಿರುದ್ಧ ಕಠಿಣ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಸ್‌ಪಿ ಗೋಪಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್‌ ಮುಖಂಡರಾದ ಬೆಕ್ಕನಹಳ್ಳಿ ನಾಗರಾಜ್, ಕವನ್‌ ಗೌಡ, ಕಾಂಗ್ರೆಸ್‌ ಮುಖಂಡರಾದ ಹಾನುಬಾಳು ಭಾಸ್ಕರ್‌, ಮುರಳಿ ಮೋಹನ್‌, ಮಾನವಬಂಧುತ್ವ ವೇದಿಕೆ ಜೈಭೀಮ್‌ ಮಂಜು, ಮುಸ್ಲಿಂಮುಖಂಡರಾದ ಸಲೀಮ್‌ ಕೊಲ್ಲಹಳ್ಳಿ, ಆನೆಮಹಲ್‌ ಹಸೈನಾರ್‌, ಇಬ್ರಾಹಿಮ್‌ ಮುಸ್ಲಿಯಾರ್‌, ಶರೀಫ ಮಿಸ್ಬಾಯಿ, ಫಾರೂಕ್‌ ಶಾಮಿಯಾನ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next