Advertisement

9ರಂದು ನಿಂಬರಗಾದಲ್ಲಿ ಪ್ರತಿಭಟನೆ

01:26 PM Feb 07, 2022 | Team Udayavani |

ಆಳಂದ: ಕಳೆದ ಜ.26ರಂದು ಆಚರಿಸಿದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಆಳಂದ ನ್ಯಾಯಾಧೀಶರು ಸೇರಿದಂತೆ ಕೆಲವೆಡೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನಿಸಿದ ಘಟನೆ ಖಂಡಿಸಿ ನಿಂಬರಗಾದಲ್ಲಿ ಫೆ. 9ರಂದು ಪ್ರತಿಭಟನೆ ನಡೆಯಲಿದೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡ ದತ್ರಾತ್ರೇಯ ಕುಡಕಿ ಹೇಳಿದರು.

Advertisement

ದಲಿತ ಮತ್ತು ಪ್ರಗತಿಪರ ಸಂಘಟಗಳ ಒಕ್ಕೂಟದ ಆಶ್ರಯದಲ್ಲಿ ಗ್ರಾಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವದಲ್ಲಿ ರಾಯಚೂರು ನ್ಯಾಯಾಧಿಧೀಶರು ಹಾಗೂ ಆಳಂದ ನ್ಯಾಯಾಧೀಶರು ಹಾಗೂ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರವನ್ನು ಕಡೆಗಣಿಸಿದ್ದಕ್ಕಾಗಿ ಗ್ರಾಮದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಮುಖಂಡ ವಿಠ್ಠಲ ಕೋಣೆಕರ್‌ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ವಲಯ ಮಟ್ಟದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ವಿಠ್ಠಲ ಕೋಣೆಕರ್‌, ರಾಜು ಸಿಂಗೆ, ಸಿದ್ಧರಾಮ ಅಷ್ಟಗಿ, ಸೂರ್ಯಕಾಂತ ಜಿಡಗಿ, ವಿಜಯಕುಮಾರ ಚಿಂಚೊಳ್ಳಿ, ಪ್ರಕಾಶ ಸರ್ವೋದಯ, ಸಿದ್ಧರಾಮ ಹಾದಿಮನಿ, ಮಹಾಂತೇಶ ಜಿಡಗಿ, ಶರಣಬಸಪ್ಪ ನಿರ್ಮಲಕರ್‌, ರೇವಣಸಿದ್ಧ ಖರ್ಚನ, ಆನಂದ ಗುಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next