Advertisement

ವನ್ಯಜೀವಿ ಹಾವಳಿ ತಡೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

04:44 PM May 05, 2022 | Team Udayavani |

ಹುಣಸೂರು : ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಸಾಕಷ್ಟು ಬೆಳೆ ಹಾನಿ-ಪ್ರಾಣ ಹಾನಿಯಾಗುತ್ತಿದ್ದರೂ ಸರಕಾರ, ಅರಣ್ಯಇಲಾಖೆ ವನ್ಯಜೀವಿಗಳ ನಿಯಂತ್ರಣಕ್ಕೆ ಕ್ರಮವಹಿಸುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹುಣಸೂರು ವನ್ಯಜೀವಿ ವಿಭಾಗದ ಕಛೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

Advertisement

ಧರಣಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ ಹುಣಸೂರು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನ ಉದ್ಯಾನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ಪ್ರಾಣಹಾನಿ ಮತ್ತು ಬೆಳೆಹಾನಿ ಆಗುತ್ತಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡಾನೆಗಳ ನಿಯಂತ್ರಿಸುವಲ್ಲಿ, ಬೆಳೆ ನಷ್ಟಕ್ಕೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರೈತಸಂಘದ ನೇತೃತ್ವದಲ್ಲಿ ಅನೇಕ ಹೋರಾಟ ನಡೆಸಿದ ಪರಿಣಾಮ ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಕಂಬಿ ತಡೆಗೋಡೆ ಕಾಮಗಾರಿ ಮಂಜೂರಾದರು ಮಂದಗತಿಯಲ್ಲಿ ಸಾಗುತ್ತಿದೆ. ಸೋಲಾರ್ ಬೇಲಿ ಎಂಬುದು ಅಧಿಕಾರಿಗಳು ದುಡ್ಡು ಹೊಡೆಯುವ ಯೋಜನೆಯಾಗಿದೆಯಷ್ಟೆ. ನೂತನ ತಾಂತ್ರಿಕತೆ ಬಳಸಿ ಕಾಡಾನೆಗಳು ನಾಡಿಗೆ ಬರದಂತೆ ತಡೆಯಬೇಕು.

ವನ್ಯಪ್ರಾಣಿಗಳಿಂದ ತೊಂದರೆಗೊಳಗಾಗುವ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲಾ, ಗಾಯಾಳುಗಳಿಗೆ ಪರಿಹಾರವು ಸಿಗುತ್ತಿಲ್ಲವೆಂದು ಅರಣ್ಯಾಧಿಕಾರಿಗಳು-ಸಿಬ್ಬಂದಿಗಳಿಗೇನಾದರೂ ತೊದರೆಯಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಾರೆಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ತಾಲೂಕಿನ ಹರಳಹಳ್ಳಿ, ಹೆಜ್ಜೂರು ಗ್ರಾಮದ ಇಬ್ಬರು ಕಾಡಾನೆಯಿಂದ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸೂಕ್ತ ಪರಿಹಾರವನ್ನು ಕೊಡದೇ, ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಸಂರಕ್ಷಣಾಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಹಿದರು.

ಎಚ್.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿಯ ರೈತ ಸುರೇಶ್ ಮಾತನಾಡಿ ರಾತ್ರಿವೇಳೆ ಕಾಡಾನೆಗಳು ರೈತರ ಜಮೀನಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ, ಬೆಳೆ ನಷ್ಟಕ್ಕೂ ಸೂಕ್ತ ಪರಿಹಾರ ನೀಡುತ್ತಿಲ್ಲ. ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿಕೊಳ್ಳಲಾಗುತ್ತಿಲ್ಲಾ. ಆದರೆ ಅಧಿಕಾರಿಗಳ ಮನೆಯಲ್ಲಿ ಕಾಡು ಕಾಯುವ ಐದಾರು ಸಿಬ್ಬಂದಿಗಳನ್ನು ನೇಮಿಸಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆಂದು ಆರೋಪಿಸಿ. ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ : ಮಸೀದಿ ನಿರ್ಮಾಣಕ್ಕೆ ಜಾಗ ನೀಡಿ ಭಾವೈಕ್ಯತೆ ಮೆರೆದ ರೈತ ಮುಖಂಡ

Advertisement

ಧರಣಿ ಸ್ಥಳದಲ್ಲಿ ತಹಶೀಲ್ದಾರ್ ಡಾ.ಅಶೋಕ್ ಮನವಿ ಸ್ವೀಕರಿಸಿ, ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಾ.ಅಧ್ಯಕ್ಷ ಚಿಕ್ಕಣ್ಣ, ಪ್ರಧಾನಕಾರ್ಯದರ್ಶಿ ರಾಮೇಗೌಡ, ಪಧಾದಿಕಾರಿಗಳಾದ ಬಸವರಾಜು, ಧನಂಜಯ,ವಿಷಕಂಠಪ್ಪ, ವಾಸು, ಈಶ್ವರ್, ರಾಮಕೃಷ್ಣೇಗೌಡ, ದಸಂಸದ ರಾಜು,ಸಿದ್ದೇಶ್ ಸೇರಿದಂತೆ ಅನೇಕ ರೈತರು ಬಾಗವಹಿಸಿದ್ದರು.

ಬೇಡಿಕೆಗಳಿವು ;
ರೈಲ್ವೆ ಕಂಬಿಯನ್ನು ಭೇದಿಸಿ ಬರುವ ಆನೆಗಳನ್ನು ತಡೆಗಟ್ಟಲು ವ್ಯವಸ್ಥಿತ ಕ್ರಮವಾಗಬೇಕು. ಬೆಳೆ ನಷ್ಟಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ನಾಶಪಡಿಸುವ ತೆಂಗು-ಅಡಿಕೆ ಮರಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಮೂರು ಭಾಗಗಳನ್ನು ರದ್ದುಗೊಳಿಸಿ, ಒಂದೇ ವಿಭಾಗದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಅರಣ್ಯಇಲಾಖೆ ಬೆಳೆಸಿದ ಮರಗಳನ್ನು ಕೆ.ಎಫ್.ಸಿ ಬದಲು ಇಲಾಖಾ ಡಿಪೋ ಮೂಲಕ ಮಾರಾಟವಾಗಬೇಕು. ಹೆಚ್.ಡಿ.ಕೋಟೆ ತಾಲ್ಲೂಕು ಅಣ್ಣೂರು ಗ್ರಾಮದ ಅರಣ್ಯ ಭೂಮಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿಕೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next