Advertisement
ಮುಳಗುಂದ ನಾಕಾದಲ್ಲಿ ಬೆಳಗ್ಗೆ ಆರು ಗಂಟೆಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮುಖಕ್ಕೆ ಕಪ್ಪುಪಟ್ಟಿ ಧರಿಸಿ, ಹಲಗೆ ಬಾರಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕೆ.ಸಿ.ರಾಣಿ ಚೆನ್ನಮ್ಮ ವೃತ್ತ ಮಾರ್ಗವಾಗಿ ಚಲಿಸುವ ಲಾರಿಗಳನ್ನು ತಡೆದು, ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಮಕಮಕಿ ನಡೆದು, ತಳ್ಳಾಟ ನಡೆಯಿತು. ಬಳಿಕ ಲಾರಿಗಳನ್ನು ಪರ್ಯಾಯ ಮಾರ್ಗವಾಗಿ ರವಾನಿಸಿದರು.
ಸಂಚಾರ ಯಥಾಸ್ಥಿತಿ:
ಬಂದ್ ಗೆ ಬೆಳಗ್ಗೆಯೇ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರಿಗೆ ಬಸ್, ವಾಹನ ಸಂಚಾರ ಸಹಜವಾಗಿತ್ತು. ಪೆಟ್ರೋಲ್ ಬಂಕ್, ಹೋಟೆಲ್, ಅಂಗಡಿಗಳು ಎಂದಿನಂತೆ ತೆರೆದಿದ್ದವು.