Advertisement

ಹಿಂದೂ ದೇವತೆಗಳ ಅವಮಾನ ಖಂಡಿಸಿ ಪ್ರತಿಭಟನೆ

02:40 PM Jan 28, 2021 | Team Udayavani |

ಬೆಳಗಾವಿ: ಸಾಮಾಜಿಕ ಜಾಲತಾಣ ಹಾಗೂ ಟಿವಿಗಳಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುತ್ತಿರುವುದನ್ನು ಖಂಡಿಸಿ ಹಮಾರಾ ದೇಶ ಸಂಘಟನೆ, ಕಪಿಲೇಶ್ವರ ಟ್ರಸ್ಟ್‌, ಆರ್ಷ ವಿದ್ಯಾ ಕೇಂದ್ರದ ಮುಖಂಡರು, ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಹಿಂದೂ ದೇವತೆಗಳನ್ನು ದೃಶ್ಯ ಮಾಧ್ಯಮದಲ್ಲಿ ಅವಮಾನಿಸಲಾಗುತ್ತಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಇತ್ತೀಚಿನ ದಿನಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸುವ ಪ್ರವೃತ್ತಿ ಹೆಚ್ಚಾಗಿದೆ. ಬಾಲಿವುಡ್‌ ಸಿನಿಮಾಗಳಲ್ಲಿ ಹಿಂದೂ ದೇವರನ್ನೇ ಗುರಿಯಗಿಸಿಕೊಂಡು ಅವಮಾನಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ನಟ ಅಮಿರಖಾನ್‌ ಅವರ ಪಿ.ಕೆ. ಸಿನಿಮಾದಿಂದ ಹಿಡಿದು ಇತ್ತೀಚೆಗೆ ಬಿಡುಗಡೆಗೊಂಡ ತಾಂಡವಚಿತ್ರದಲ್ಲೂ ಹಿಂದೂ ದೇವ ದೇವತೆಗಳನ್ನು ಅವಹೇಳನಕಾರಿಯಾಗಿ ಚಿತ್ರೀಸಲಾಗಿದೆ  ಎಂದು ಆರೋಪಿಸಿದರು.

ಹಿಂದೂಗಳ ಭಾವನೆಗಳನ್ನು ಲಕ್ಷéದಲ್ಲಿ ಇಟ್ಟುಕೊಂಡು ಇದಕ್ಕೆಲ್ಲ ಸರಕಾರ ಕಡಿವಾಣ ಹಾಕಬೇಕು. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗದಂತೆ ನೊಡಿಕೊಳ್ಳಬೇಕು. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಇಂತಹ ಪ್ರವೃತ್ತಿಗೆ ಲಗಾಮು ಹಾಕಬೇಕು. ಹಿಂದಿ ವೆಬ್‌ ಸೀರಿಸ್‌ ತಾಂಡವ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ರೈಲಿಗಾಗಿ ಇಳಕಲ್ಲ ಜನ ಸಮಿತಿ ಮನವಿ

Advertisement

ಹಮಾರಾ ದೇಶ ಸಂಘಟನೆಯ ಮುಖಂಡ ಪ್ರಕಾಶ ರಾಯಚೂರು ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಿನಲ್ಲಿ ಹಿಂದೂ ದೇವರನ್ನೇ ಗುರಿಯಾಗಿಸಿ ಅವಮಾನಿಸಿ ದಂಧೆ ನಡೆಸಲಾಗುತ್ತಿದೆ. ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ತಾಳ್ಮೆಯ ಕಟ್ಟೆ ಒಡೆದು ಹೋದರೆ ಮುಂದೆ ಉಗ್ರ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಕೆ ನೀಡಿದರು. ಹಮಾರಾ ದೇಶ ಸಂಘಟನೆಯ ಪ್ರಾಜಕ್ತಾ ಬೇಡೇಕರ ಮಾತನಾಡಿ, ಸೆನ್ಸಾರ್‌ ಬೋರ್ಡ್‌ ಇದ್ದರೂ ಹಿಂದೂ ದೇವತೆಗಳ ಅವಮಾನ ತಪ್ಪಿಸಲು ಆಗುತ್ತಿಲ್ಲ. ಇದನ್ನೆಲ್ಲ ಸಹಿಸಿಕೊಂಡು ಹಿಂದೂಗಳು ಸುಮ್ಮನೆ ಇರುವುದಿಲ್ಲ.ಹಿಂದೂಗಳು ಒಗ್ಗೂಡಿ ಎದ್ದರೆ ಅವಹೇಳನ ಮಾಡುವವರು ಚಿಂದಿಯಾಗುವುದು ಖಚಿತ. ಸರಕಾರ ಹಿಂದೂಗಳ ಅವಹೇಳನ ತಪ್ಪಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next