ಕೋಲಾರ: ಪೆಟ್ರೋಲ್-ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ ಗ್ಯಾಸ್ ಬೆಲೆ, ಆಟೋ ರಿಕ್ಷಾ ಬಿಡಿಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ಪ್ರಯಾಣದ ಕನಿಷ್ಠ ದರ 36 ರೂ.ಗಳಿಗೆ ನಿಗದಿ ಮಾಡಲು ಆಗ್ರಹಿಸಿ ಜಿಲ್ಲಾ ತ್ರಿಚಕ್ರವವಾಹನಚಾಲಕರ ಸಂಘ, ರಾಜ್ಯ ಆಟೋ ಚಾಲಕರ ಕಲ್ಯಾಣಜಂಟಿ ಕ್ರಿಯಾ ಸಮಿತಿಯಿಂದ ನಗರದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಲಾಯಿತು.
ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಚಾಲಕರು, ಸಂಘಟನೆಗಳ ಮುಖಂಡರು ದೇಶಾದ್ಯಂತತೈಲೋತ್ಪನ್ನಗಳು, ಆಟೋ ಬಿಡಿ ಭಾಗಗಳು, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರು ದಿನನಿತ್ಯದ ಆದಾಯಕ್ಕೆಪರದಾಡುವಂತಾಗಿದೆ ಎಂದು ದೂರಿದರು.
ಜೀವನೋಪಾಯಕ್ಕೆ ಕಷ್ಟ: ಒಂದು ದಿನಕ್ಕೆ ಇಂದಿನ ಕನಿಷ್ಠ ಪ್ರಯಾಣ ದರ 25 ರೂ.ಗಳಂತೆ 20 ಬಾಡಿಗೆಮಾಡಿದರೆ 500 ರೂ. ಸಂಪಾದನೆ ಆಗುತ್ತದೆ. ಇದರಲ್ಲಿ ಇಂಧನಕ್ಕೆ 4-6 ಲೀ. ಗ್ಯಾಸ್‌ಗೆ 400 ರೂ ಖರ್ಚಾಗುತ್ತಿದ್ದು, ಪ್ರತಿದಿನ ಆಟೋ ಚಾಲಕರುತಮ್ಮ ಜೀವನೋಪಾಯಕ್ಕೆ ಸಾಲ ಸೂಲ ಮಾಡುವ ಪರಿಸ್ಥಿತಿ ಉಂಟಾಗಿದೆ. ವಾಹನದ ದುರಸ್ತಿ ಹಾಗೂನಿರ್ವಹಣೆಗೆ ಸಾವಿರಾರು ರೂ. ಖರ್ಚು ಆಗುತ್ತಿರುವುದಾಗಿ ಹೇಳಿದರು.
ವೃತ್ತಿ ತೊರೆಯುವ ಸ್ಥಿತಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮನೆ ಬಾಡಿಗೆ, ಮಕ್ಕಳವಿದ್ಯಾಭ್ಯಾಸ, ಆರೋಗ್ಯ ಮತ್ತಿತರ ವಿಚಾರಕ್ಕೆಆಟೋ ಚಾಲಕರು ಪರದಾಡುವಂತಾಗಿದೆ. ಕೋವಿಡ್ ದಿಂದಾಗಿ ಜೀವನಾಧಾರ ಕಳೆದುಕೊಂಡಿರುವ ಶ್ರಮಿಕ ವರ್ಗದ ಚಾಲಕರು, ಈ ಉದ್ಯಮವನ್ನು ತೊರೆದು ರಸ್ತೆ ಬದಿ ವ್ಯಾಪಾರಕ್ಕೆ ಮುಂದಾಗುವ ಸ್ಥಿತಿಗೆ ತಲುಪಿದ್ದಾರೆ ಎಂದರು.
ಪ್ರತಿ ಕಿ.ಮೀ.ಗೆ 18 ರೂ.ಗೆ ಹೆಚ್ಚಿಸಿ: ಕೋಲಾರ ಜಿಲ್ಲೆಯಲ್ಲಿ ಆಟೋ ರಿಕ್ಷಾ ಕನಿಷ್ಠ ಪ್ರಯಾಣ ದರ ಮೊದಲ 2.25 ಕಿ.ಮೀ.ಗೆ 25 ರೂ., ನಂತರದ ಪ್ರತಿ ಕಿ.ಮೀ.ಗೆ 12.50 ರೂ.ಗಳಂತೆ ನಿಗ ಯಾಗಿದ್ದು, ಕೂಡಲೇ ಕನಿಷ್ಠ ಪ್ರಯಾಣ ದರವನ್ನು 36 ರೂ.ಗಳಿಗೆ ನಿಗ ದಿ ಮಾಡಿ ನಂತರ ಪ್ರತಿ ಕಿ.ಮೀ.ಗೆ 18 ರೂ.ಗೆ ಏರಿಕೆ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಜಿಲ್ಲಾಧ್ಯಕ್ಷಜೆ.ಜಿ.ಶ್ರೀನಿವಾಸಮೂರ್ತಿ, ತಾಲೂಕು ಅಧ್ಯಕ್ಷಕೆ.ನಾರಾಯಣಸ್ವಾಮಿ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಸುಬ್ರಹ್ಮಣಿ, ಉಪಾಧ್ಯಕ್ಷ ಅಮ್ಜದ್‌ಪಾಷ, ಮಾಜಿ ಅಧ್ಯಕ್ಷ ರಾಮೇಗೌಡ, ಪದಾ ಕಾರಿಗಳಾದ ವೇಣುಗೋಪಾಲ್, ಬೇತಮಂಗಲ ಅಪ್ಸರ್ ಪಾಷ, ಮಂಜುನಾಥ್, ಚಲಪತಿ ಮತ್ತಿತರಿದ್ದರು.