ಕನಕಪುರ: ನಿರಂತರ ಕಾಡಾನೆ ದಾಳಿ ಯಿಂದ ಬೆಳೆ ಕಳೆದುಕೊಂಡಿದ್ದ ರೈತರು ತಾಳ್ಮೆ ಕಳೆದುಕೊಂಡು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಶುಕ್ರವಾರ ಕೊಡಿಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಕೋಡಿಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಸುತ್ತಮುತ್ತಲ ಗ್ರಾಮದ ಹತ್ತಾರು ರೈತರು ಮುತ್ತಿಗೆ ಹಾಕಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೋಡಿಹಳ್ಳಿ ವ್ಯಾಪ್ತಿಯ ಗರಳಾಪುರ ಅರಕೆರೆ ಹಲಸೂರು ಪ್ಲಾಂಟೇಶನ್ ಬೆಟ್ಟೆಗೌಡನ ದೊಡ್ಡಿ ಗ್ರಾಮಗಳಲ್ಲಿ ತಿಂಗಳಿಂದ ಕಾಡಾ ನೆಗಳು ನಿರಂತರ ದಾಳಿ ನಡೆಸುತ್ತಿವೆ. ಇಲಾಖೆ ತಿರುಗಿಯೂ ನೋಡುತ್ತಿಲ್ಲ ಎಂದು ಹೇಳಿದರು.
ಬೆಳೆ ಕಳೆದುಕೊಂಡ ರೈತರು ಹಾಕಿದ್ದ ಬಂಡವಾಳ ಸಿಗದೆ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡು ತೀರಿಸಲಾಗದೆ ಕಂಗಲಾ ಗಿದ್ದಾರೆ. ಕಾಡಾನೆಗಳಿಂದ ಆದ ಬೆಳೆ ನಾಶದ ಸ್ಥಳ ಪರಿಶೀಲನೆಗೆ ಬನ್ನಿ ಎಂದರೆ ಅಧಿಕಾರಿಗಳು ಬರೋದಿಲ್ಲ. ಇಲಾಖೆ ಯಿಂದ ಕೊಡುವ ಅಲ್ಪ ಪರಿಹಾರ ಪಡೆಯಬೇಕಾದರೆ ವರ್ಷಗಳೇ ಬೇಕು ಎಂದು ಆಕ್ರೋಶ ಹೊರಹಾಕಿದರು.
ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ನಾವು ಇರುವುದು ಮೂರು ಜನ. ನಿರ್ವಹಣೆ ವ್ಯಾಪ್ತಿ ಮಾತ್ರ ದೊಡ್ಡ ದಾಗಿದೆ. ಒಂದು ಕಡೆ ಓಡಿಸಿದರೆ ಆನೆ ಗಳು ಮತ್ತೂಂದು ಕಡೆ ಬರುತ್ತವೆ. ನಾವು ಕಾಡಿಗೆ ಓಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಮೂರು ದಿನ ಕಾಲವಕಾಶ ಕೊಡಿ, ಕನಕಪುರದ ಸಿಬ್ಬಂದಿ ಸಹಕಾರದೊಂದಿಗೆ ಆನೆ ಕಾಡಿಗಟ್ಟುವ ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯ ಅಧಿಕಾರಿಗಳು ಮನವಿ ಮಾಡಿದರು.