Advertisement

ಶಾಂತಿಗ್ರಾಮ ಟೋಲ್‌ಗೇಟ್‌ ಸಿಬ್ಬಂದಿ ವಿರುದ್ಧ ಪ್ರತಿಭಟನೆ

04:20 PM Feb 07, 2023 | Team Udayavani |

ಹಾಸನ: ರಾಷ್ಟ್ರೀಯ ಹೆದ್ದಾರಿ-75ರಲ್ಲಿರುವ ಶಾಂತಿಗ್ರಾಮ ಟೋಲ್‌ಗೇಟ್‌ನ ಸಿಬ್ಬಂದಿಯ ದೌರ್ಜನ್ಯ ಖಂಡಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಟೋಲ್‌ಗೇಟ್‌ ಬಳಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಶಾಂತಿಗ್ರಾಮ ಟೋಲ್‌ಗೇಟ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿ ಭಟನಾಕಾರರು, ಟೋಲ್‌ಗೇಟ್‌ನ ಮೇನೇಜ ರ್‌ಗಳಾದ ಫ್ರಾನ್ಸಿಸ್‌, ಸೋಮಶೇಖರ್‌ ಅವರು ದರ್ಪದಿಂದ ವರ್ತಿಸುತ್ತಿದ್ದಾರೆ. ಟೋಲ್‌ನ ಸಿಬ್ಬಂದಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.

Advertisement

ಪೊಲೀಸರೂ ಬೆಂಬಲ: ಕಳೆದ 10-1 5 ವರ್ಷಗಳಿಂದಲೂ ಬೆಂಗಳೂರು ರಸ್ತೆ ಯಲ್ಲಿ ಹಾಸನದಿಂದ 14 ಕಿ.ಮೀ. ದೂರದ ಶಾಂತಿಗ್ರಾಮದ ಬಳಿ ಟೋಲ್‌ಗೇಟ್‌ ಇದೆ. ಇಲ್ಲಿ ಸ್ಥಳೀಯರ ವಾಹನಗಳಿಗೂ ಶುಲ್ಕ ವಸೂಲಿ ಮಾಡುತ್ತಿ ದ್ದಾರೆ. ರೈತರು ಹೊಲ, ಗದ್ದೆಗೆ ಹೋಗಲು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲೂ ಶುಲ್ಕ ಪಾವತಿಸ ಬೇಕಾಗಿದೆ. ಸ್ಥಳೀಯರಿಗೆ ಶುಲ್ಕ ವಿನಾಯ್ತಿ ನೀಡಬೇಕು ಎಂದು ಕೇಳಿದರೆ ಟೋಲ್‌ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿ ದ್ದಾರೆ. ಸ್ಥಳೀ ಯ ಪೊಲೀಸರೂ ಟೋಲ್‌ನವರ ಬೆಂಬ ಲಕ್ಕೆ ನಿಲ್ಲುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

60 ಕಿ.ಮೀ. ಒಂದು ಟೋಲ್‌ ಹಾಕಿ: ಎನ್‌ ಎಚ್‌ಎಐ ನಿಯಮಗಳ ಪ್ರಕಾರ ಸ್ಥಳೀಯರಿಗೆ ಹಾಗೂ ರೈತರಿಗೆ ರಸ್ತೆ ಸುಂಕ ಪಾವತಿಯ ವಿನಾಯ್ತಿ ನೀಡಬೇಕು. ಕೇಂದ್ರ ಸರ್ಕಾರದ ಆದೇಶದಂತೆ 60 ಕಿ.ಮೀ. ಒಂದು ಟೋಲ್‌ ಗೇಟ್‌ ಇರಬೇಕು. ಆದರೆ, ಬೆಂಗಳೂರು ರಸ್ತೆಯಲ್ಲಿ ಶಾಂತಿಗ್ರಾಮ -ಹಿರಿಸಾವೆ ನಡುವೆ 47 ಕಿ.ಮೀ.ಗೆ ಒಂದು, ಹಿರೀಸಾವೆ-ಬೆಳ್ಳೂರು ಕ್ರಾಸ್‌ ನಡುವೆ 17 ಕಿ.ಮೀ.ಒಂದು ಟೋಲ್‌ ಗೇಟ್‌ ಇದೆ. ಇವುಗಳನ್ನು ತೆರವುಗೊಳಿಸಿ 60 ಕಿ.ಮೀ.ಗೆ ಒಂದು ಟೋಲ್‌ಗೇಟ್‌ ನಿರ್ಮಾಣ ಮಾಡಬೇಕು. ಟೋಲ್‌ಗೇಟ್‌ನಲ್ಲಿ ಶೌಚಾಲಯ, ಕುಡಿಯುವ ನೀರು, ಒಂದೊಂದು ಟೋಲ್‌ಗೇಟ್‌ನಲ್ಲಿ ಆಂಬ್ಯುಲೆನ್ಸ್‌ ಇರ ಬೇಕು. ಸರ್ವಿಸ್‌ ರಸ್ತೆ ನಿರ್ಮಾಣ ಮಾಡ ಬೇಕು. ಟೋಲ್‌ಗೇಟ್‌ನಲ್ಲಿ ಕನ್ನಡಿಗರಿಗೆ ಹಾಗೂ ಸ್ಥಳೀಯರಿಗೇ ಕೆಲಸ ಕೊಡಬೇಕು ಎಂದೂ ಪ್ರತಿಭಟನಾಕಾರು ಒತ್ತಾಯಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಒಂದು ಹಂತದಲ್ಲಿ ಟೋಲ್‌ಗೇಟ್‌ನ ಸಿಬ್ಬಂದಿ, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದುದರಿಂದ ಅಹಿತಕರ ಘಟನೆಗಳು ನಡೆಯಲಿಲ್ಲ. ಟೋಲ್‌ಗೇಟ್‌ ಕಚೇರಿ ಮಂದೆ ಪ್ರತಿಭಟನಾಕಾರರು ಶಾಮಿಯಾನ ಹಾಕಿಕೊಂಡು ಧರಣಿ ನಡೆಸಿದರು.

ಒಕ್ಕಲಿಗರ ಸೇನೆ ರಾಜ್ಯಾಧ್ಯಕ್ಷ ಎಚ್‌.ಎನ್‌. ರಾಕೇಶ್‌ಗೌಡ, ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಪಾಂಡುರಂಗ, ಅನಂತಕುಮಾರ್‌, ಭೋವಿ ಸಂಘದ ಜಿಲ್ಲಾಧ್ಯಕ್ಷ ಸಂದೀಪ್‌, ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಂಜಣ್ಣ, ಸುರೇಶ್‌ಬಾಬು, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಿನೇಶ್‌ಗೌಡ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಬಾಳ್ಳುಗೋಪಾಲ್‌, ಕರವೇ ಶಿವರಾಮೇಗೌಡ ಬಣ ಅಧ್ಯಕ್ಷ ಪ್ರವೀಣ್‌ಗೌಡ, ಪವನ್‌ ಕುಮಾರ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next