Advertisement

ಬಂದ್‌ ಕರೆ ಹಿನ್ನೆಲೆ: ಕೊಡಗಿನಲ್ಲಿ  ಪೊಲೀಸ್‌ ಸರ್ಪಗಾವಲು

09:30 AM Nov 10, 2018 | Team Udayavani |

ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೊಡಗು ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮ  ಕೈಗೊಂಡಿದ್ದು, ವಿವಿಧ ಪೊಲೀಸ್‌ ತುಕಡಿಗಳು ಮಡಿಕೇರಿ ನಗರದಲ್ಲಿ ಪಥಸಂಚಲನ ನಡೆಸಿದವು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಪನ್ನೇಕರ್‌ ನೇತೃತ್ವದಲ್ಲಿ ನಗರದ ವಿವಿಧ ರಸ್ತೆ ಹಾಗೂ ಬಡಾವಣೆಗಳಲ್ಲಿ ಪಥಸಂಚಲನ ನಡೆಸಿದ ಶಸ್ತ್ರಸಜ್ಜಿತ ಪೊಲೀಸರು ಜನರಲ್ಲಿ  ಧೈರ್ಯ ತುಂಬಿದರು. ಟಿಪ್ಪು ಜಯಂತಿಯ ಬಂದೋಬಸ್ತ್ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ 1,500ರಿಂದ 2 ಸಾವಿರ ಪೊಲೀಸ್‌ ಸಿಬಂದಿ ಹಾಗೂ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. 

ಚಾಮರಾಜನಗರದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರನ್ನು ಜಿಲ್ಲೆಗೆ ನಿಯುಕ್ತಿ ಮಾಡಲಾಗಿದೆ, 6 ಡಿವೈ ಎಸ್‌ಪಿ, 20 ಪೊಲೀಸ್‌ ಇನ್ಸ್‌ ಪೆಕ್ಟರ್‌, 46 ಸಬ್‌ ಇನ್ಸ್‌ಪೆಕ್ಟರ್‌, 104 ಎಎಸ್‌ಐ, 300 ಹೋಂ  ಗಾರ್ಡ್ಸ್‌, 850 ಪೊಲೀಸ್‌ ಸಿಬಂದಿ, 21 ಡಿಎಆರ್‌ ತುಕಡಿ ಗಳು, 10 ಕೆಎಸ್‌ಆರ್‌ಪಿ ತುಕಡಿ ಗಳನ್ನು ಹಾಗೂ ರ್ಯಾಪಿಡ್‌ ಆಕ್ಷನ್‌ ಫೋರ್ಸ್‌ ಅನ್ನು ನಿಯುಕ್ತಿ ಗೊಳಿಸಲಾಗಿದೆ. 

ಜಿಲ್ಲೆಯ ಮಡಿಕೇರಿ ನಗರ, ಸೋಮ ವಾರಪೇಟೆ ಹಾಗೂ ವಿರಾಜ ಪೇಟೆ ಪಟ್ಟಣದಲ್ಲಿ ಜಿಲ್ಲಾಡಳಿತದ ವತಿ ಯಿಂದ ಶನಿವಾರ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಮೂರೂ ತಾಲೂಕುಗಳಲ್ಲಿ ಪೊಲೀಸ್‌ ಸರ್ಪಗಾವಲಿದೆ.

ಬಂದ್‌ಗೆ ಕರೆ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯು ನ. 10ರಂದು ಸ್ವಯಂ ಪ್ರೇರಿತ ಕೊಡಗು ಬಂದ್‌ಗೆ ಕರೆ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಂದ್‌ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಅಭಿಮನ್ಯು ಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next