Advertisement

14 ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ಪ್ರತಿಭಟನೆ

06:28 PM Aug 30, 2022 | Team Udayavani |

ರಾಯಚೂರು: ಗುಜರಾತ್‌ನಲ್ಲಿ ಬಿಲ್ಕಿಸ್‌ ಬಾನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪದಡಿ ಜೈಲಿನಲ್ಲಿದ್ದ 14 ಆರೋಪಿಗಳನ್ನು ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿದರು.

Advertisement

ನಗರದ ಡಾ| ಅಂಬೇಡ್ಕರ್‌ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. 20 ವರ್ಷಗಳ ಹಿಂದೆ ಬಿಲ್ಕಿಸ್‌ ಬಾನುರನ್ನು 14 ಜನ ದುಷ್ಕರ್ಮಿಗಳು ಸೇರಿ ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಇವರನ್ನು ಬಂಧಿಸಿ ಬಂಧನ ಮಾಡಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಆ.15ರ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನದಂದು, ಗುಜರಾತ್‌ ಸರ್ಕಾರವು ವಿಶೇಷ ಶಿಕ್ಷಾ ಕಾನೂನಿನಡಿ ಎಲ್ಲ ಅಪರಾ ಧಿಗಳನ್ನು ಬಿಡುಗಡೆಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

14 ಅಪರಾಧಿಗಳು ಬಿಡುಗಡೆ ಮಾಡಿದ್ದಲ್ಲದೇ ರಾಜ್ಯಾತೀಥ್ಯ ನೀಡಿ ಗೌರವಿಸಿ ಸನ್ಮಾನಿಸಿರುವುದು ನಾಚಿಕೆಗೇಡು. ಪ್ರಧಾನ ಮಂತ್ರಿಗಳ ತವರು ರಾಜ್ಯದಲ್ಲಿ ಇಂಥ ಅನ್ಯಾಯ ನಡೆದಿರುವುದು ವಿಷಾದನೀಯ. ಈ ಘಟನೆಯಿಂದ ದೇಶದಲ್ಲಿ ಮಹಿಳೆಯರಿಗೆ ನ್ಯಾಯ ಸಿಗುವ ವಿಶ್ವಾಸವೇ ಕಳೆದುಕೊಂಡಂತಾಗಿದೆ. 14 ಆರೋಪಿಗಳಿಗೆ ಶಿಕ್ಷೆ ವಿನಾಯಿತಿ ನೀಡಿರುವುದನ್ನು ನಿಲ್ಲಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಸದಸ್ಯರಾದ ಮಾರೆಪ್ಪ ಹರವಿ, ವಿದ್ಯಾ ಪಾಟೀಲ್‌, ಬಸಮ್ಮ, ಮಾರೆಮ್ಮ, ಖಾಜಾ ಅಸ್ಲಂ ಪಾಷಾ, ಪಾರ್ವತಿ, ವಿರುಪಮ್ಮ, ಎಚ್‌.ಪದ್ಮಾ, ಜನಾರ್ಧನ ಹಳ್ಳಿಬೆಂಚಿ, ವಿರುಪಮ್ಮ, ಪಾರ್ವತಿ, ಜಾನ್‌ ವೆಸ್ಲಿ ಸೇರಿ ಇತರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next