Advertisement
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಿವ್ಯಾಂಗರು, ಕಳೆದ ಆರು ತಿಂಗಳ ಹಿಂದೆ ಸದರಿ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಪರಿಣಾಮ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರಿದ್ದಾರೆ.
Related Articles
Advertisement
ಸದರಿ ಅಧಿಕಾರಿಯ ಭ್ರಷ್ಟಾಚಾರಕ್ಕೆ ತನಿಖಾಧಿಕಾರಿಗಳು ತನಿಖೆ ನಡೆಸದೇ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನವಿದೆ. ಇದರಿಂದ ದಿವ್ಯಾಂಗರು ಕಂಗಾಲಾಗಿದ್ದು, ನಮ್ಮ ಬಾಳಿಗೆ ದಾರಿದೀಪವಾಗಬೇಕಾದ ಉನ್ನತ ಮಟ್ಟದ ಅಧಿಕಾರಿಗಳೆ ನಮ್ಮ ಭಾವನೆ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿದ್ದು, ಯಾರಲ್ಲಿ ನ್ಯಾಯ ಕೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಮಲ್ಲಿಕಾರ್ಜುನ ಉಮರಾಣಿ ಮಾತನಾಡಿ, ಜಿಲ್ಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೇಮಕಾತಿಯಲ್ಲಿ ದಿವ್ಯಾಂಗರ ನೇಮಕಕ್ಕೆ ಸರಕಾರದ ಆದೇಶವಿದ್ದರೂ ಅಂಗವಿಕಲರ ಕಲ್ಯಾಣ ಅಧಿಕಾರಿ ಗಳು ಸರ್ಕಾರದ ಆದೇಶ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ದೂರಿದರು.
ಸಂಘಟನೆಯ ಪ್ರಮುಖರಾದ ತಾಲೂಕಾಧ್ಯಕ್ಷ ಅಂಬಣ್ಣ ಗುನ್ನಾಪುರ, ಶಂಕ್ರಮ್ಮ ಕೋರಿ, ಇಂಡಿ ತಾಲೂಕಾ ಕಾರ್ಯದರ್ಶಿ ಶಿವಲಿಂಗಪ್ಪ, ಸಾವಿತ್ರಿ ಮೋರೆ, ರಮೀಜಾ ಮಕಾನಂದರ, ಸುನಿಲ ತೇಲಕರ, ಅನಿಲ ಪವಾರ, ನಿಮಿಷ ಆಚಾರ್ಯ, ನಾಗಪ್ಪ ಬೆಂಕಿ, ಅರುಣ ವಾಗದಂಡೆ, ನೂರಹ್ಮದ ಪಠಾಣ, ಅಶೋಕ ಚೋಳಕ್ಕೆ, ಎಸ್.ಜಿ.ಮೆಂಡೆಗಾರ, ಮುಸ್ತಾಕ ತಾಳಿಕೋಟಿ, ಸಂಗಮೇಶ ಉಕ್ಕಲಿ, ಉ‚ಷಾ ಮೈಲಕರ, ಸಾಗಾರ ಸಾವಳಗಿ, ಜಿ.ಆರ್ ರಾಠೊಡ ಮತ್ತು ವಿ.ಯಾ ರಾಠೊಡ ಸೇರಿದಂತೆ ಇದ್ದರು.