Advertisement

ಹೊಲೋ ಬ್ಲಾಕ್‌ ಘಟಕ ತೆರವಿಗೆ ಪ್ರತಿಭಟನೆ

10:58 PM May 06, 2019 | Team Udayavani |

ಸುಳ್ಯ: ನಗರದ ಭಸ್ಮಡ್ಕ ಬಳಿಯ ಹೊಲೋ ಬ್ಲಾಕ್‌ ತಯಾರಿ ಘಟಕದಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹೊಲೋ ಬ್ಲಾಕ್‌ ಅನ್ನು ಯಂತ್ರಗಳ ಮೂಲಕ ತಯಾರಿಸುತ್ತಿರುವುದರಿಂದ ತೀವ್ರ ಶಬ್ದ ಮತ್ತು ಧೂಳಿನಿಂದ ತೊಂದರೆ ಆಗುತ್ತಿದೆ. ಇದನ್ನು ತೆರವು ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಮನೆಯವರಾದ ಗಂಗಾಧರ ಕೆ. ಮತ್ತು ಗಣೇಶ್‌, ಪ್ರವೀಣ ಮತ್ತಿತರರು ಪ್ರತಿಭಟನೆ ನಡೆಸಿದರು.

Advertisement

ಪರಿಶೀಲಿಸಿಯೇ ಅನುಮತಿ
9 ವರ್ಷಗಳ ಹಿಂದೆ ಕಾನೂನು ರೀತಿಯಲ್ಲಿ ಘಟಕ ಆರಂಭಿಸಿದ್ದೇವೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅನುಮತಿ ನೀಡಿದ್ದರು. ಸಂಸ್ಥೆ ಆರಂಭಿಸುವ ಸಂದರ್ಭ ಸಮೀಪದಲ್ಲಿ ಮನೆಗಳಿರಲಿಲ್ಲ. ಆ ಬಳಿಕ ಮನೆ ನಿರ್ಮಾಣವಾಗಿದೆ. ಇದೀಗ ನಮ್ಮ ಸಂಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಾವು ಏಕಾಏಕಿ ನಿಲ್ಲಿಸಿದರೆ ಜೀವನಕ್ಕೆ ತೊಂದರೆ ಆಗುತ್ತದೆ. ತತ್‌ಕ್ಷಣಕ್ಕೆ ಇದನ್ನು ಎಲ್ಲಿಗೆ ಸ್ಥಳಾಂತರಿಸುವುದು? ಆದ್ದರಿಂದ ಕೆಲವು ಸಮಯ ನಮಗೆ ಅವಕಾಶ ಬೇಕು ಎಂದು ಅಧಿಕಾರಿಗಳನ್ನು ವಿನಂತಿಸಿದ್ದೇವೆ ಎಂದು ಹೊಲೋ ಬ್ಲಾಕ್‌ ಘಟಕದ ಮಾಲಕ ಗಂಗಾಧರ ಕುರುಂಜಿ ತಿಳಿಸಿದ್ದಾರೆ.

ನಮ್ಮ ಆರೋಗ್ಯ ಹದಗೆಟ್ಟಿದೆ
ಹೊಲೋ ಬ್ಲಾಕ್‌ ಘಟಕದ ಮುಂಭಾಗದಲ್ಲಿ ಕುಳಿತು ಪ್ರತಿಭಟಿಸಿದ ಅವರು, ನಾವು ಪ್ರತಿನಿತ್ಯ ಧೂಳು ಸೇವಿಸಿ ಆರೋಗ್ಯ ಕೆಡುವ ಸ್ಥಿತಿ ಉಂಟಾಗಿದೆ. ಹಗಲು ರಾತ್ರಿ ಎನ್ನದೆ ಕರ್ಕಶ ಶಬ್ದ ಬರುತ್ತಿವೆ. ಇದರಿಂದ ವಾಸ ಮಾಡಲು ತೊಂದರೆಯಾಗಿದೆ. ಇದನ್ನು ಇಲ್ಲಿಂದ ತೆರವು ಮಾಡುವ ತನಕ ನಾವು ಪ್ರತಿಭಟಿಸುತ್ತೇವೆ. ನಗರ ಪಂಚಾಯತ್‌, ಜಿಲ್ಲಾಧಿಕಾರಿ ತನಕ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ ಪ್ರತಿಭಟನ ನಿರತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next