Advertisement

ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

05:27 PM Aug 02, 2022 | Team Udayavani |

ಶಹಾಬಾದ: ರಾಜ್ಯ ಸರಕಾರದ ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ವಕೀಲರ ಸಂಘ ಸೋಮವಾರ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಗ್ರೇಡ್‌-2 ತಹಶೀಲ್ದಾರ್‌ ಗುರುರಾಜ ಸಂಗಾವಿ ಅವರ ಮುಖಾಂತರ ಸಲ್ಲಿಸಲಾಯಿತು.

Advertisement

ಜನನ ಮತ್ತು ಮರಣ ನೋಂದಣಿ ವಿಳಂಬದ ಸಂಬಂಧ ವಿವಾದಗಳು ಏರ್ಪಟ್ಟಲ್ಲಿ ಅಥವಾ ತಿದ್ದುಪಡಿ ಅವಶ್ಯಕವಿದ್ದಲ್ಲಿ ವ್ಯಕ್ತಿಗಳು ಜನನ ಮತ್ತು ನೋಂದಣಿ ಕಾಯ್ದೆ ಕಲಂ-13ರ ಪ್ರಕಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ನೀಡಿ ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಈ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುತ್ತಿದ್ದರು. ಆದರೆ ಕರ್ನಾಟಕ ಸರಕಾರ ಈ ಮೇಲೆ ಹೇಳಿದ ಆದೇಶದ ಅನ್ವಯ ಈಗಿರುವ ಜೆಎಂಎಫ್‌ಸಿ ನ್ಯಾಯಾಲಯದ ಅಧಿಕಾರವನ್ನು ತೆಗೆದು ಉಪ-ವಿಭಾಗಾಧಿಕಾರಿಗಳ ನ್ಯಾಯಾಂಗಕ್ಕೆ ನೀಡಿದೆ. ಇದು ಜನ ಸಂದಣಿಗೆ ತೊಂದರೆ ನೀಡುವ ಮತ್ತು ಕ್ರಮಬದ್ಧ ರೀತಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಕಷ್ಟ ಸಾಧ್ಯವಾಗುತ್ತದೆ.

ಈಗಾಗಲೇ ರೆವಿನ್ಯೂ ನ್ಯಾಯಾಲಯಗಳಲ್ಲಿ ಪ್ರಭಾವ, ಅಸಂಬದ್ಧ ಆದೇಶಗಳು ನೀಡುವ ಮೂಲಕ ಜನರಿಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ. ಒಂದೊಮ್ಮೆ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಈ ಅಧಿಕಾರವನ್ನು ನೀಡಿದ್ದಲ್ಲಿ ದೂರದ ಕಕ್ಷಿದಾರರು ಎಸಿ ಕಚೇರಿಗೆ ಬರಬೇಕಾಗಿದೆ. ಇದರಿಂದ ಜನಸಾಮಾನ್ಯರು ಓಡಾಡಿ ಹರಸಾಹಸ ಪಡಬೇಕಾಗುತ್ತದೆ.

ಈಗ ಹೊರಡಿಸಿರುವ ಜನನ ಮತ್ತು ಮರಣ ನೋಂದಣಿ ಸಂಬಂಧ ಕರ್ನಾಟಕ ರಾಜ್ಯ ಸರಕಾರದ ಅಧಿಸೂಚನೆ ವಾಪಸು ಪಡೆದು ಈ ಹಿಂದಿನಂತೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಮುಂದುವರೆಸುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಈ ವೇಳೆ ದೇವಪ್ಪ ಕುಲಕುಂದಿ, ಜ್ಯೋತಿ, ರವೀಂದ್ರ ಕಟ್ಟಿಮನಿ, ರಮೇಶ ರಾಠೊಡ, ನಾಗೇಶ ಧನ್ನೇಕರ್‌, ತಿಮ್ಮಯ್ಯ ಮಾನೆ, ರಘುವೀರಸಿಂಗ ಠಾಕೂರ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next