ತಿ.ನರಸೀಪುರ: ಸಂವಿಧಾನಕ್ಕೆ ವಿರುದ್ಧವಾಗಿ ರಚಿತವಾಗಿರುವ ರೋಹಿತ್ ಚಕ್ರತೀರ್ಥನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ವಜಾಗೊಳಿಸಿ, ಪಠ್ಯ ಪುಸ್ತಕದ ವಿಚಾರದಲ್ಲಿಯೂ ಗೊಂದಲ-ವಿವಾದ ಹುಟ್ಟು ಹಾಕಿ ರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀ ನಾಮೆಗೆಆಗ್ರಹಿಸಿ ದಸಂಸ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ಪರಿಷ್ಕೃತ ಪಠ್ಯವನ್ನು ಸುಡುವ ಚಳವಳಿಗೆ ಪ್ರಗತಿಪರ ಸಂಘಟನೆ ಗಳು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಜಮಾ ವಣೆಗೊಂಡಿದ್ದದಸಂಸ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಕೋಮು ಸೌಹಾರ್ದತೆ ಕದಡಲು ಪಠ್ಯ ವನ್ನು ತಿರುಚುತ್ತಿರುವ ಪುಸ್ತಕ ಪರಿಷ್ಕರಣೆ ಸಮಿತಿ ವಜಾಕ್ಕೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆಒತ್ತಾಯಿಸಿ ಸರ್ಕಾರದ ಪರಿಷ್ಕೃತ ಪಠ್ಯಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಸ್ವಾತಂತ್ರ್ಯ ಚಳಿವಳಿಗೆವಿರುದ್ಧವಾಗಿದ್ದ ಹೆಗಡೆವಾರ್ ವಿಚಾರವನ್ನುಪಠ್ಯಕ್ಕೆ ಸೇರಿಸುವ ಮೂಲಕ ಮಕ್ಕಳಲ್ಲಿಯೂ ಕೋಮು ವಿಷಬೀಜವನ್ನು ಬಿತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಚಿವ ಬಿ.ಸಿ.ನಾಗೇಶಅವರನ್ನು ಸಂಪುಟ ದಿಂದ ತೆಗೆದು, ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸ ಬೇಕು ಎಂದು ಆಗ್ರಹಿಸಿದರು.
ನಂತರ ತಹಶೀಲ್ದಾರ್ ಬಿ.ಗಿರಿಜಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ತಾಲೂಕು ಸಂಚಾಲಕ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಕಾಡಾದ ಮಾಜಿ ನಿರ್ದೇಶಕ ಹಿರಿಯೂರು ವಿರೇಂದ್ರ (ನವೀನ), ಮುಖಂಡರಾದ ಸೋಮಣ್ಣ ಹಿರಿಯೂರು, ಕಿರಗಸೂರು ರಜನಿ, ನಾಗರಾಜ ಮೂರ್ತಿ, ಸುಜ್ಜಲೂರು ಶಿವಯ್ಯ, ಸೋಸಲೆಶಿವಣ್ಣ, ಮಹದೇವ, ಶಿವರಾಂ, ಉಮೇಶ, ಶಾಂತರಾಜು, ಮದನ್, ಉದಯಕುಮಾರ್, ನವೀನ್, ಕೇತಹಳ್ಳಿ ಪ್ರಶಾಂತ್, ಮುತ್ತತ್ತಿನಾಗರಾಜು, ಮರಿಸಿದ್ದಯ್ಯ, ರಂಗಸಮುದ್ರ ನಂಜುಂಡ, ರಂಗಸ್ವಾಮಿ, ದೇವರಾಜು ಇದ್ದರು.