Advertisement

ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ

12:44 PM Jan 07, 2020 | Suhan S |

ದಾವಣಗೆರೆ: ಶಿವಸೇನೆ ಪುಂಡಾಟಿಕೆ ನಡೆಸುತ್ತಿದೆ ಮತ್ತು ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ನಾಡದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮಹಾರಾಷ್ಟ್ರದ ಕೊಲ್ಲಾಪುರದ ಶಿವಸೇನೆ ಮುಖ್ಯಸ್ಥ ದೀಪಕ್‌ ದೀವಾನಿ ಮತ್ತು 20ಕ್ಕೂ ಹೆಚ್ಚು ಪುಂಡರು ಕನ್ನಡ ಧ್ವಜ ಸುಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಶಿವಸೇನೆಯ ಪುಂಡಾಟವನ್ನು ಕನ್ನಡಿಗರು ಸಹಿಸುವುದೇ ಇಲ್ಲ. ನಾಡದ್ರೋಹಿ ಕೆಲಸ ಮಾಡುತ್ತಿರುವ ಶಿವಸೇನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ತಮ್ಮ ಎದುರಾಳಿಯ ಬಗ್ಗೆ ಮಾತನಾಡುವ ಭರದಲ್ಲಿ ಕನ್ನಡ ನಾಡ ದ್ರೋಹಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ದೂರಿದರು. ವೇದಿಕೆ ರಾಜ್ಯ ಸಂಚಾಲಕಿ ಎನ್‌. ಎಸ್‌. ಸುವರ್ಣಮ್ಮ, ಮಂಜುನಾಥ್‌ ಬಣಕಾರ್‌, ಶೈಲಜಾ, ಶಿವಮ್ಮ, ಕೆ.ಟಿ. ಪ್ರಭು, ಮಲ್ಲಮ್ಮ, ಎನ್‌. ಮಂಜುನಾಥ್‌, ಮಂಜಮ್ಮ, ಮಂಜುಳಾ, ಹುಲಿಗೆಮ್ಮ

Advertisement

Udayavani is now on Telegram. Click here to join our channel and stay updated with the latest news.

Next