ಶಹಾಪುರ: ಇಲ್ಲಿನ ನಗರಸಭೆ ಅಧ್ಯಕ್ಷೆ ಆಡಳಿತ ಬದಲಿಗೆ ಅವರ ಪತಿ ಮತ್ತು ಮಗನ ಹಸ್ತಕ್ಷೇಪ ಹೆಚ್ಚಾಗಿದೆ. ಅಲ್ಲದೆ ನಗರಸಭೆಯಿಂದ ರಸ್ತೆ ದುರಸ್ತಿ, ವಾಹನ ಬಾಡಿಗೆ ಮತ್ತು ಕೊಳವೆ ಬಾವಿ ದುರಸ್ತಿ ಹೆಸರಲ್ಲಿ ಲಕ್ಷಾಂತರ ರೂ. ಲೂಟಿ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಗರಸಭೆ ಎದುರು ಶುಕ್ರವಾರ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಶಿವಪುತ್ರ ಜವಳಿ, ಆಡಳಿತ ನಡೆಸಬೇಕಾದ ಅಧ್ಯಕ್ಷೆ ತನ್ನ ಅಧಿ ಕಾರವನ್ನು ಪತಿರಾಯಗೆ ನೀಡಿದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಮನವಿ ಸ್ವೀಕರಿಸಿದರು. ಶಿವಲಿಂಗ ಹಸನಾಪುರ, ಚಂದಪ್ಪ ಮುನಿಯಪ್ಪನವರ್, ಮರೆಪ್ಪ ಕ್ರಾಂತಿ, ದವಿ ಒಕ್ಕೂಟದ ಮಲ್ಲಿಕಾರ್ಜುನ ಹುರಸಗುಂಡಗಿ, ಬಾಲರಾಜ್ ಖಾನಾಪುರ, ವೀರಭದ್ರಪ್ಪ ತಳವಾರಗೇರಿ, ಎಂ. ಪಟೇಲ್, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ವಾಸು ಕೋಗಲಕರ್, ಶೇಖರ ಮಂಗಳೂರ, ಮೌನೇಶ ಸೆಳ್ಳಿಗಿ, ಶ್ರೀಮಂತ ಸಿಂಗನಳ್ಳಿ, ಶರಣಪ್ಪ, ಬಸವಲಿಂಗಪ್ಪ, ಲಕ್ಷಣ ಇದ್ದರು.