Advertisement

ರಾಜೀವ್‌ ನಗರ ಬಡಾವಣೆ ನಿವೇಶನ ವಂಚಿತರ ಪ್ರತಿಭಟನೆ

12:41 PM Jul 04, 2017 | Team Udayavani |

ಮೈಸೂರು: ರಾಜೀವ್‌ ನಗರ ಬಡಾವಣೆ ನಿರ್ಮಿಸಿ ನಿವೇಶನ ನೀಡುವುದಾಗಿ ಹಣ ಕಟ್ಟಿಸಿಕೊಂಡು ಐದು ವರ್ಷವಾದರೂ ನಿವೇಶನವನ್ನೂ ನೀಡದೆ, ಹಣವನ್ನೂ ನೀಡದ ಹೋಮ್‌ ಡೆವಲಪರ್ಸ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ನಿವೇಶನ ವಂಚಿತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

Advertisement

ಹೋಮ್‌ ಡೆವಲಪರ್ಸ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸೈಯದ್‌ ನಿಜಾಂಆಲೀ ನಿವೇಶನ ನೀಡುವುದಾಗಿ ನಂಬಿಸಿ ನಗರ ಹಾಗೂ ಹೊರಗಿನ ಸುಮಾರು ಎರಡು ಸಾವಿರ ಮಂದಿಗೆ ವಂಚಿಸಿದ್ದಾರೆ. 2005 ರಿಂದಲೂ ಮೂರುವರೆ ಕೋಟಿಯಷ್ಟು ಹಣ ಕಟ್ಟಿಸಿಕೊಂಡು ವಂಚನೆ ಮಾಡಿದ್ದು, ಈವರೆಗೆ ನೂರಾರು ಕೋಟಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದರು.

ಈ ಸಂಬಂಧ ದೂರು ನೀಡಿದ ಪರಿಣಾಮ ಸಿಸಿಬಿ ತನಿಖೆ ನಡೆಸಿ ವರದಿ ನೀಡಿದ್ದರೂ, ಸರ್ಕಾರ ಈ ಸಂಬಂಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಲವರು  ಮಂದಿ ನ್ಯಾಯಾಲಯದ ಮೊರೆ ಹೋದ ಕಾರಣ 173 ಬಾರಿ ವಾರೆಂಟ್‌, ಸಮನ್ಸ್‌ ಜಾರಿಗೊಂಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹಾಗಾಗಿ ಕೂಡಲೇ ವ್ಯವಸ್ಥಾಪಕ ನಿರ್ದೇಶಕ ಸೈಯದ್‌ ನಿಜಾಂಆಲೀ ಯನ್ನು ಬಂಧಿಸಬೇಕು. ನಮ್ಮ ಹಣವನ್ನು ವಾಪಸ್‌ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ವೈ.ಗುರುಪ್ರಸಾದ್‌, ಕಾರ್ಯದರ್ಶಿ ಡಾ. ಕೆ.ಎಲ್‌. ಕೃಷ್ಣ, ಗಣೇಶ್‌ಮೂರ್ತಿ, ಶ್ರೀನಿವಾಸಪ್ರಸಾದ್‌, ಮಧುಶ್ರೀ, ಪ್ರಸನ್ನಕುಮಾರ್‌, ಗೀತಾ, ಹನುಮಂತರಾಜು ಸೇರಿದಂತೆ ನೂರಾರು ಮಂದಿ ನಿವೇಶನ ವಂಚಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next