Advertisement

ಅಮಾಯಕರ ಮೇಲೆ ಪಿ.ಎಸ್.ಐ ದರ್ಪ ಆರೋಪ: ಆಲ್ದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

12:54 PM Oct 27, 2020 | keerthan |

ಚಿಕ್ಕಮಗಳೂರು: ಅಮಾಯಕ ದಲಿತ ಯುವಕರ ಮೇಲೆ ಪಿ.ಎಸ್.ಐ ದರ್ಪ ತೋರಿಸಿದ್ದಾರೆಂದು ಆರೋಪಿಸಿ ಆಲ್ದೂರು ಪೊಲೀಸ್ ಠಾಣೆ ಎದುರು ವಿವಿಧ ದಲಿತ ಸಂಘಟನಗಳು ಪ್ರತಿಭಟನೆ ನಡೆಸುತ್ತಿದೆ.

Advertisement

ತಾಲ್ಲೂಕಿನ ಹಲಸುಮನೆ ಗ್ರಾಮದಲ್ಲಿ ಇತ್ತೀಚೆಗೆ ಗಂಧದ ಮರ ಕಳವು ಪ್ರಕರಣ ಸಂಬಂಧ ಆಲ್ದೂರು ಠಾಣೆ ಪೊಲೀಸರು ಇತ್ತೀಚೆಗೆ ಮೂವರು ದಲಿತ ಯುವಕರನ್ನು ಠಾಣೆಗೆ ಕರೆದ್ಯೊದ್ದಿದ್ದರು. ಪೊಲೀಸರು ಬಂಧಿಸಿದ ಹಲಸುಮನೆ ಗ್ರಾಮದ ಮೂವರು ದಲಿತರು ಅಮಾಯಕರಾಗಿದ್ದು, ಪ್ರಭಾವಿಗಳ ಕುಮ್ಮಕ್ಕಿನ ಮೇರೆಗೆ ಪೊಲೀಸರು ಅಮಾಯಕ ದಲಿತರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧನಕ್ಕೊಳಗಾದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಮೂರು ದಿನಗಳ ಠಾಣೆಯಲ್ಲಿ ಇರಿಸಿಕೊಂಡು ಆರೋಪವನ್ನು ಒಪ್ಪಿಕೊಳ್ಳಲು ದೈಹಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸರ ವರ್ತನೆ ಬಗ್ಗೆ ಸಂಘಟನೆಗಳ ಮುಖಂಡರು ಪ್ರಶ್ನಿಸಿದಾಗ, ಕಳೆದ ಶುಕ್ರವಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದಾರೆ.

Advertisement

ಈ ಘಟನೆಯನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ಮಂಗಳವಾರ ಪೋಲಿಸ್ ಠಾಣೆಯ ಎದುರು ಜಮಾಯಿಸಿ ಆಲ್ದೂರು ಪೋಲಿಸ್ ಠಾಣೆ ಪಿ.ಎಸ್.ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಂಧದ ಕಳವು ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಮೂವರು ಯುವಕರು ಅಮಾಯಕರಾಗಿದ್ದು, ನೈಜ ಆರೋಪಿಗಳನ್ನು ಬಿಟ್ಟು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಪಿ.ಎಸ್.ಐ ಶಂಭುಲಿಂಗಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next