Advertisement

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

07:31 PM Feb 13, 2021 | Team Udayavani |

ಅಥಣಿ: ಕೇಂದ್ರ ಸರ್ಕಾರದ ಜನವಿರೋಧಿ  ಕಾಯ್ದೆ ಹಾಗೂ ತೈಲ ಬೆಲೆ, ಜೀವನಾವಶ್ಯಕ ವಸ್ತುಗಳ ದರಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಶ್ರೀ ಮುರುಘೇಂದ್ರ ಬ್ಯಾಂಕ್‌ ಎದುರಿನಿಂದಅಂಬೇಡ್ಕರ್‌ ವೃತ್ತದವರೆಗೂ ಎತ್ತಿನ ಗಾಡಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮೋದಿಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೊಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಕೇಂದ್ರದ ಜನವಿರೋಧಿ ಕಾಯ್ದೆ ಖಂಡಿಸಿ ದೇಶದ ತುಂಬೆಲ್ಲ ಪ್ರತಿಭಟನೆ ನಡೆದಿವೆ. ಎಲ್ಲವೂ ಖಾಸಗೀಕರಣಕ್ಕೆಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಬಾನಿ, ಅದಾನಿ ಕಂಪನಿಗಳ ಕೈಗೆ ದೇಶವನ್ನು ಮಾರಾಟಮಾಡುವ ತಂತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಗೃಹ ಸಚಿವ ಅಮಿತ್‌ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ135 ಕೋಟಿ ಜನತೆಯ ಕಾಳಜಿ ಇಲ್ಲ, 50ಜನರು ಉದ್ಯಮಿಗಳ ಕಾಳಜಿ ಸರ್ಕಾರ ಇದು ಎಂದು ನುಡಿದರು. ದಿನಬಳಕೆ ವಸ್ತುಗಳ ದರಹೆಚ್ಚಳವಾಗಿದ್ದರೂ ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆ. ಇದರಿಂದಾಗಿ ಬಳೆ ಕಳಿಸುವ ವಿಚಾರವಿದೆ ಎಂದರು.

ಅಥಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ತೆಲಸಂಗ್‌ ಬ್ಲಾಕ್‌ ಅಧ್ಯಕ್ಷ ಶ್ರೀಕಾಂತ ಪೂಜಾರಿ, ರಮೇಶ ಸಿಂದಗಿ, ಯುವ ಘಟಕಅಧ್ಯಕ್ಷ ರವಿ ಬಡಕಂಬಿ, ಸತ್ಯಪ್ಪ ಭಾಗೆನ್ನವರ,ಸುನೀಲ್‌ ಸಂಕ, ಅನಿಲ ಸುಣಧೋಳಿ, ಸದಾಶಿವಬುಟಾಳಿ, ಬಸವರಾಜ ಬುಟಾಳಿ, ರಾವಸಾಬ್‌ ಐಹೊಳೆ, ಬಸವರಾಜ ಠಕ್ಕಣ್ಣವರ, ಸಲಾಂ ಕಲ್ಲಿ,ಕೇದಾರಿ ಬಡಕಂಬಿ, ತೌಸಿಫ್‌ ಸಾಂಗಲೀಕರ,ಏಕನಾಥ ಕುಂಬಾರ, ಸಚಿನ ಬಡಕಂಬಿ, ರಾಮಲಿಂಗ ಬಡಕಂಬಿ, ಮಂಜುನಾಥ ಹೋಳಿಕಟ್ಟಿ, ಧರೆಪ್ಪ ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next