ತುಮಕೂರು: ದೇಶವ್ಯಾಪಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತಗಳ ಬೆಲೆ ಗಗನಕ್ಕೆ ಏರುತ್ತಿದ್ದರೂ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭಾನುವಾರ ನಗರದಲ್ಲಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಸಮಾವೇಶ ಗೊಂಡ ಸಿಪಿಐಎಂಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧಘೋಷಣೆ ಕೂಗಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಕೇಂದ್ರ ಸರ್ಕಾರದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ದೇಶದಜನತೆಗೆ ಬೆಲೆ ಏರಿಕೆ ನಿಯಂತ್ರಿ›ಸುತ್ತೇವೆ ಎಂದುಪ್ರಣಾಳಿಕೆಯಲ್ಲಿ ತಿಳಿಸಿ ಮೋದಿಯವರುಸೇರಿದಂತೆ ಇತರೆ ಬಿಜೆಪಿ ಮುಖಂಡರು ದೇಶದ ತುಂಬೆಲ್ಲಾ ಭಾಷಣಮಾಡಿ ಅಧಿಕಾರಕ್ಕೆ ಬಂದಮೇಲೆ ಬೆಲೆ ಏರಿಕೆ ನಿಯಂತ್ರಣ ಮಾಡದೆದೇಶದ ಜನತೆಗೆ ಬಿಜೆಪಿ ನೀಡಿದ ಮಾತಿಗೆ ತಪ್ಪಿದೆ ಎಂದು ಕಿಡಿಕಾರಿದರು.
ಕೋವಿಡ್-19 ದಾಳಿ, ಜಿ.ಎಸ್.ಟಿ. ಜಾರಿ, ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗನಾಗಾಲೋಟದ ಮಧ್ಯೆ ಎಲ್ಲಾಅಗತ್ಯವಸ್ತುಗಳಾದ ಬೇಳೆ ಕಾಳು, ಅಡಿಗೆ ಎಣ್ಣೆ,ವಿಶೇಷವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್‌ಬೆಲೆ ಏರಿಕೆಯಿಂದ ಜನಸಾಮಾನ್ಯರು,ಮಧ್ಯಮ ವರ್ಗದವರ ಬದುಕು ಸಂಕಷ್ಟದಲ್ಲಿದೆಇಂಧನ ಬೆಲೆಗಳನ್ನು ವಿವೇಚನೆಯಿಲ್ಲದೆಏರಿಸಲಾಗುತ್ತಿದೆ ಎಂದರು.
ಸಿ.ಪಿ.ಐ (ಎಂ) ರಾಜ್ಯ ಸಮಿತಿ ಸದಸ್ಯ ಮುಜೀಬ್, ಕೆ.ಪಿ.ಆರ್ ಎಸ್.ನ ಸಿ.ಅಜ್ಜಪ್ಪ ಸಿ.ಪಿ.ಐ.(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬುಮಣ್ಯ, ಶಿವಕುಮಾರ್, ದೀಲಿಪ್,ಶಂಕರಪ್ಪ, ಮಂಜು, ನಂಜುಡಸ್ವಾಮಿ,ರಾಘವೇಂದ್ರ, ಶ್ರೀನಿವಾಸ್, ಕಲೀಲ್, ಕಂಠಪ್ಪ, ಅಂಜುಮಂ, ಲಕ್ಷ್ಮೀಕಾಂತ್, ಹೊನ್ನೇಶ ಇತರರು ಇದ್ದರು. ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಈ ಪ್ರಚಾರಾಂದೋಲನ ಫೆ. 21 ರಿಂದ 28 ರ ವರಗೆ ನಡೆಯಲಿದೆ.