ಆಳಂದ: ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಂಗ್ರೆಸ್ ಬೆಂಬಲಿತರ ಮನೆಮೇಲೆ ಪೊಲೀಸರು ಹಠಾತ್ ದಾಳಿ ಕೈಗೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ನೇತೃತ್ವದಲ್ಲಿ ಬೆಂಬಲಿಗರು ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರು
ಮಂಗಳವಾರ ಧರಣಿ ಸತ್ಯಾಗ್ರಹ ಕೈಗೊಂಡರು. ಚುನಾವಣೆ ಮುನ್ನಾದಿನ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ಡಿವೈಎಸ್‌ಪಿ ಕಡಗಂಚಿ ಗ್ರಾಮದ ಕಸ್ತೂರಬಾಯಿ ಕರಬಸಪ್ಪ ನರೋಣಿ ಅವರ ಮನೆ ಮೇಲೆ ಚುನಾವಣೆ ನೀತಿ ಸಂಹಿತೆ ಆರೋಪ ನೆಪಮಾಡಿ, ಮನೆಯಲ್ಲಿ ಊಟಕ್ಕೆ ಕುಳಿತವರನ್ನು ನೋಡದೇ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮನೆಹೊಕ್ಕು ಹೊಡೆಯುವ ಅಧಿಕಾರ ಇವರಿಗೆ ಯಾರು ನೀಡಿದ್ದಾರೆ. ಕ್ಷೇತ್ರದ ಶಾಸಕರ ಅಣತಿಯಂತೆ ಅವರ ಕೈಗೊಂಬೆಯಾಗಿ ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಖಂಡಿಸಿದರು.
ಜಿ.ಪಂ ಸದಸ್ಯ ಸಿದ್ಧರಾಮ ಪ್ಯಾಟಿ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ,ಸತೀಶ ಪನಶೆಟ್ಟಿ, ಅಬ್ದುಲ ಸಲಾಂ ಸಗರಿ, ಪಂಡಿತ ಶೇರಿಕಾರ, ಶಂಕರರಾವ್ ದೇಶಮುಖ, ದಿಲೀಪಕ್ಷೀರಸಾಗರ ಹಾಗೂ ಪಾಟೀಲರ ನೂರಾರು ಮಂದಿ ಬೆಂಬಲಿಗರು ಪಾಲ್ಗೊಂಡಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್‌ಪಿ ಭೇಟಿ ನೀಡಿ, ಘಟನೆ ಕುರಿತು ಸೂಕ್ತ ತನಿಖೆ ಕೈಗೊಂಡುಕ್ರಮ ಜರುಗಿಸಲಾಗುವುದು. ಚುನಾವಣೆ ಪರಿಸ್ಥಿತಿಯಲ್ಲಿ ಎಲ್ಲವೂ ಗೊತ್ತಾಗುವುದಿಲ್ಲ. ತಾಳ್ಮೆಯಿಂದ ಸಹಕರಿಸಿ ಎಂದಾಗ 15 ದಿನಗಳಲ್ಲಿ ಬೇಡಿಕೆಗೆ ಸ್ಪಂದಿಸಬೇಕು ಎಂದು ಮುಖಂಡರು ಗಡವು ನೀಡಿದರು.
ಕಡಗಂಚಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರಿನ ಕರೆ ಮೆರೆಗೆ ಸಿಪಿಐ ಅವರನ್ನು ಕಳುಹಿಸಿಕೊಟ್ಟರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ವತಃ ನಾನೇ ಭೇಟಿ ನೀಡಿದ್ದೆ. ಅಲ್ಲಲ್ಲಿ ಜನ ಗುಂಪಾಗಿ ಇದ್ದಿದ್ದನ್ನು ಕಂಡು ಅವರನ್ನು ಮನೆಗೆಕಳುಹಿಸಲಾಯಿತು. ನಂತರ ನರೋಣಿಎನ್ನುವರಿಗೆ ಸೇರಿದ ಮನೆ ಹೊರಗೆ 20ರಿಂದ30 ದ್ವಿಚಕ್ರವಾಹನ ಕಂಡವು. ಒಳಗೆ ಹೆಚ್ಚಿನ ಜನರು ಸೇರಿ ಕುಳಿತು ಊಟ ಮಾಡುತ್ತಿದ್ದರು. ಹೀಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಿದ್ದರಿಂದ ಅವರನ್ನು ಚದುರಿಸಲಾಗಿದೆ. ನಾವು ತಪ್ಪು ಮಾಡಿಲ.É ಯಾರ ಒತ್ತಡಕ್ಕೂ ಒಳಗಾಗಿಲ್ಲ. ಕಾನೂನು ಪಾಲಿಸಿದ್ದೇವೆ. –
ಮಲ್ಲಿಕಾರ್ಜುನ ಸಾಲಿ, ಡಿವೈಎಸ್ಪಿ