Advertisement

ಶಾಸಕ ರಾಜುಗೌಡ ವಿರುದ್ದ ಪ್ರತಿಭಟನೆ

03:55 PM Aug 18, 2022 | Team Udayavani |

ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಕಚೇರಿಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಭಾವಚಿತ್ರ ಇಡದೇ ಅವಮಾನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕ ರಾಜುಗೌಡ ಮತ್ತು ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಬೇಡ್ಕರ್‌ ಸ್ವಾಭಿಮಾನಿ ಸೇನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.

Advertisement

ಧ್ವಜಾರೋಹಣದ ವೇಳೆ ಉದ್ದೇಶಪೂರ್ವಕವಾಗಿ ಬಾಬಾ ಸಾಹೇಬರ ಫೋಟೋವನ್ನು ಇಟ್ಟಿಲ್ಲ. ಪ್ರತಿ ವರ್ಷ ಇಡುತ್ತಿದ್ದ ಫೋಟೋ ಈ ಬಾರಿ ಇಡದೇ ಇರಲು ಕಾರಣವೇನು ಎನ್ನುವುದು ತಿಳಿಯುತ್ತಿಲ್ಲ. ಇದರ ಹಿಂದೆ ರಾಜಕೀಯ ಕಾರಣಗಳಿರುವ ಅನುಮಾನವಿದೆ. ಆದ್ದರಿಂದ ಕೂಡಲೇ ತಹಶೀಲ್ದಾರ್‌ ಅವರನ್ನು ಅಮಾನತು ಮಾಡಬೇಕು ಮತ್ತು ರಾಜುಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ಶಾಂತಕುಮಾರ ಬಿ.ಹೆಚ್‌, ಜಿಲ್ಲಾ ಕಾರ್ಯದರ್ಶಿ ಸಿದ್ದು ಎಸ್‌. ದೊಡ್ಡಮನಿ, ಉಪಾಧ್ಯಕ್ಷ ಸುನೀಲ ರಾಠೊಡ, ಸೋಮು ಜಾಧವ, ಶ್ರೀಮಂತ ಹರನೂರು, ಅರ್ಜುನ ಕಟ್ಟಿಮನಿ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next