ಮರಿಯಮ್ಮನಹಳ್ಳಿ: ಆದಿಜನ ಪಂಚಾಯತಿ ಆಂದೋಲನಾ ವತಿಯಿದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿವಿರೋಧಿಸಿ ನಮ್ಮ ಭೂಮಿ ನಮಗಿರಲಿ ಚಳವಳಿ ಅಂಗವಾಗಿ ಪಟ್ಟಣದ ಸಮೀಪದಡಣಾಪುರದಲ್ಲಿ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಆದಿ ಜನಪಂಚಾಯತಿ ಆಂದೋಲನಾ ಹೊಸಪೇಟೆ ತಾಲೂಕು ಸಂಯೋಜಕಿ ದೊಡ್ಡಮನಿ ಶಂಕ್ರಮ್ಮ ಮಾತನಾಡಿ, 1961ರಲ್ಲಿ ಜಾರಿಗೆ ಬಂದಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ಇದೇ ಜೂನ್ ತಿಂಗಳಲ್ಲಿ ಸುಗ್ರೀವಾಜ್ಞೆ ಮೂಲಕ ಅನೇಕತಿದ್ದುಪಡಿಗಳನ್ನು ಜಾರಿಗೆ ತಂದಿದೆ.ಈ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಣಾಂತಿಕವಾಗಿದೆ.
ಭೂಮಿಯಿಂದಲೇ ನಮ್ಮ ಜೀವನ ಭೂಮಿಯಿಂದಲೇ ನಮಗೆ ಅನ್ನ, ಭೂಮಿ ಇಲ್ಲದೇ ಹೋದರೆ ನಮಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಐದು ವರ್ಷಕ್ಕೊಮ್ಮೆ ಭೂ ರಹಿತರಿಗೆ ಭೂಮಿ ಕೊಡುವ ಅವಕಾಶವಿತ್ತು. ಈಗ ಈ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಕಾಯ್ದೆಯ ತಿದ್ದುಪಡಿ ವಿರುದ್ಧ ನಾವೆಲ್ಲರೂ ನಿಲ್ಲಬೇಕಾಗಿದೆ.
ಆದಿ ಜನ ಪಂಚಾಯಿತಿ ಆಂದೋಲನಾ ವತಿಯಿಂದ ಒಂದು ಕುಟುಂಬಕ್ಕೆ ಐದು ಎಕರೆ ಭೂಮಿ ಕೊಡಿ ಎಂದು 2013ರಲ್ಲಿಸಮೀಕ್ಷೆ ಮಾಡಿ ಮನವಿ ಮಾಡುತ್ತಾಬಂದಿದ್ದೇವೆ. ಆದರೆ ಸರ್ಕಾರ ಭೂ ರಹಿತರಿಗೆ ಭೂಮಿ ಕೊಡುವುದನ್ನುಬಿಟ್ಟು ಬಂಡವಾಳ ಶಾಹಿಗಳಿಗೆ ಭೂಮಿ ಖರೀದಿಸುವ ಅವಕಾಶ ಕಲ್ಪಿಸಿಕೊಡುತ್ತಿದೆ.ಈ ಕಾಯ್ದೆಯ ತಿದ್ದುಪಡಿಯ ವಿರುದ್ಧ ಆದಿ ಜನ ಪಂಚಾಯಿತಿ ಆಂದೋಲನವು ರಾಜ್ಯಾದ್ಯಾಂತಪತ್ರ ಚಳವಳಿ, ಗೋಡೆ ಬರಹ, ಕರಪತ್ರ ಹಂಚುವಿಕೆ, ಅಂತರ್ಜಾಲ ಕಮ್ಮಟಗಳ ಮೂಲಕಗಳ ಹೋರಾಟ ಹಮ್ಮಿಕೊಳ್ಳುತ್ತಿದೆ. ಸರ್ಕಾರ ಈಕೂಡಲೆ ಈ ಕಾಯ್ದೆ ತಿದ್ದುಪಡಿ ಕೈ ಬಿಟ್ಟು ಭೂ ರಹಿತರಿಗೆ ಭೂಮಿ ಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಕೃಷಿಕ ಮಹಿಳೆ ದುರುಗಮ್ಮ ಮಾತನಾಡಿ, ಕೊರೊನಾ ಬಂದುಉದ್ಯೋಗಳನ್ನು ಕಸಿದುಕೊಂಡಿದೆ. ನಮ್ಮ ಭೂಮಿ ಇದ್ದರೆ ನಮಗೆ ಉಣ್ಣಾಕ ಅನ್ನನಾದರೂ ಸಿಗುತ್ತೆ ನಮ್ಮ ಭೂಮಿ ಕೊಟ್ಟು ನಾವು ದೇಶ್ಯಾಂತರ ಹೋಗಾಣೇನು. ದನಕರ ಮಕ್ಕಳು ಮರಿ ನಾವೆಲ್ಲಾ ಬದುಕೋದು ಹೇಗೆ. ನಮ್ಮ ಭೂಮಿ ನಮಗೆ ಇರಲಿ ನಾವು ಯಾರಿಗೂ ಕೊಡಲ್ಲ ಎಂದರು. ಹನುಮಕ್ಕ ಶಾರದಮ್ಮ, ಹುಲಿಗೆಮ್ಮ ಮತ್ತಿತರ ಕೃಷಿಕ ಮಹಿಳೆಯರು ಮಾತನಾಡಿ, ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ ಎಂದು ಆಗ್ರಹಿಸಿದರು.
ಆದಿ ಜನಪಂಚಾಯತಿ ಆಂದೋಲನಾ ಹಗರಿಬೊಮ್ಮನಹಳ್ಳಿ ತಾಲೂಕು ಸಂಯೋಜಕ ರಾಮಣ್ಣ, ರೈತರಾದ ಗುಡದಪ್ಪ, ಹನುಮಂತಪ್ಪ, ಪ್ರಕಾಶ್ ಅಂಜಿನಪ್ಪ ಮತ್ತಿತರರು ಇದ್ದರು.
ಆದಿ ಜನ ಪಂಚಾಯಿತಿ ಆಂದೋಲನಾ ವತಿಯಿಂದ ಒಂದು ಕುಟುಂಬಕ್ಕೆ ಐದು ಎಕರೆ ಭೂಮಿ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಭೂರಹಿತರಿಗೆ ಭೂಮಿ ಕೊಡುವುದನ್ನು ಬಿಟ್ಟು ಬಂಡವಾಳ ಶಾಹಿಗಳಿಗೆ ಭೂಮಿ ಖರೀದಿಸುವ ಅವಕಾಶ ಕಲ್ಪಿಸಿಕೊಡುತ್ತಿದೆ. ಈ ಕಾಯ್ದೆಯ ತಿದ್ದುಪಡಿಯ ವಿರುದ್ಧ ಆದಿ ಜನ
ಪಂಚಾಯಿತಿ ಆಂದೋಲನವು ರಾಜ್ಯಾದ್ಯಾಂತ ಹೋರಾಟ ಹಮ್ಮಿಕೊಳ್ಳುತ್ತಿದೆ. ರೈತರು ಈಗ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಭೂಮಿಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮುಂದಿನ ಪೀಳಿಗೆ ಅನಾಥರಾಗುತ್ತಾರೆ
.-ದೊಡ್ಡಮನಿ ಶಂಕ್ರಮ್ಮ, ಆದಿ ಜನ ಪಂಚಾಯತಿ ಆಂದೋಲನಾ ಸಂಚಾಲಕಿ