Advertisement

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ

02:16 PM Jun 28, 2022 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ನಾಲ್ಕು ಗ್ರಾಮಗಳಿಗೆ ಇದ್ದಕ್ಕಿದ್ದಂತೆ ಕೆಐಎಡಿಬಿ ಮೂಲಕ ಅಧಿಸೂಚನೆ ಕೊಟ್ಟಿದ್ದು, ಭೂಸ್ವಾಧೀನಕ್ಕೆ ಯಾವುದೇ ಕಾರಣಕ್ಕೂ ಜಮೀನು ಬಿಡುವುದಿಲ್ಲವೆಂದು ರೈತರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟಿಸಿದರು.

Advertisement

ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಿಂದ ಪ್ರಾರಂಭವಾದ ಪ್ರತಿಭಟನೆ ರ್ಯಾಲಿ, ಜಿಲ್ಲಾಡಳಿತ ಭವನದ ಆವರಣಕ್ಕೆ ತಲುಪಿ ರಾಜ್ಯ ಸರ್ಕಾರ ಮತ್ತು ಕೆಐಎಡಿಬಿ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕಿನ ಕುಂದಾಣ ಹೋಬಳಿಯ ಅರುವನಹಳ್ಳಿ, ಚಪ್ಪರದಹಳ್ಳಿ, ದೊಡ್ಡಗೊಲ್ಲಹಳ್ಳಿ, ಬೈರದೇನಹಳ್ಳಿ ಗ್ರಾಮದಲ್ಲಿ ಸಾಕಷ್ಟು ರೈತರು ಕೃಷಿಯವಲಂಬಿತರಾಗಿದ್ದಾರೆ. ಇಂತಹ ಫ‌ಲವತ್ತಾದ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ದಿನನಿತ್ಯ ಈ ಭಾಗದಲ್ಲಿ ರೈತಾಪಿಗಳು ನಡೆಸುತ್ತಾರೆ. ಆದರೆ, ಕೆಐಎಡಿಬಿ 2010ರಲ್ಲಿ 4(1) ಕೊಟ್ಟಿದ್ದು, ಅದರ ವಿರುದ್ಧ ಅಂದೇ ದೊಡ್ಡ ಹೋರಾಟ ನಡೆದು ಭೂಸ್ವಾಧೀನ ಮಾಡದಂತೆ ಘೊಷಣೆ ಮಾಡಿದ್ದವು.

ಜಿಲ್ಲಾಧಿಕಾರಿಗೆ ಮನವಿ: ಆದಾದ ನಂತರ ಜೂ.8ರಂದು 12 ವರ್ಷದ ನಂತರ ಇದ್ದಕ್ಕಿದ್ದಂತೆ ಕೆಐಎಡಿಬಿ 6(1) ಅಧಿಸೂಚನೆ ಕೊಟ್ಟಿದೆ. ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ಕೆಐಎಡಿಬಿ ಸ್ವಾಧೀನತೆಗೆ ಕೊಡುವುದಿಲ್ಲ ಎಂದು ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಅವರಿಗೆ ರೈತರು ಮತ್ತು ಹೋಬಳಿಯ ಮುಖಂಡರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳ ಮನೆ ಮುತ್ತಿಗೆ: ಎಚ್ಚರಿಕೆ : ಕರ್ನಾಟಕ ರಾಜ್ಯ ರೈತ ಶಕ್ತಿ ರಾಜ್ಯಾಧ್ಯಕ್ಷ ಹೊನ್ನರಘಟ್ಟ ಮಹೇಶ್‌ ಮಾತನಾಡಿ, ಕೆಐಎಡಿಬಿ 920ಎಕರೆ ಭೂಮಿಗೆ ನೋಟಿಫಿಕೇಷನ್‌ ಕೊಟ್ಟಿದೆ. ಇಲ್ಲಿರುವ ಭೂಮಿ ಫ‌ಲವತ್ತಾದ ಭೂಮಿಯಾಗಿದೆ. ಬಯಲು ಸೀಮೆಯಲ್ಲಿ ಅದರಲ್ಲೂ ಮುಖ್ಯವಾಗಿ ಈ ತಾಲೂಕಿನ ನಾಲ್ಕು ಹಳ್ಳಿಗಳಲ್ಲಿ ಹೆಚ್ಚಾಗಿ ರೈತರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದಲಿತರ, ಹಿಂದುಳಿದ, ಬಡವರ ಮತ್ತು ಸಣ್ಣ ಇಳುವರಿ ಭೂಮಿಗಳಿಗೆ ಕೈಹಾಕಿರುವುದು ಖಂಡನೀಯವಾದದ್ದು, ಜಿಲ್ಲಾಧಿಕಾರಿಗೆ ಸಾಂಕೇತಿಕ ಮನವಿ ನೀಡುತ್ತಿದ್ದೇವೆ. ಇದಕ್ಕೆ ಮಣಿದು ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸದಿದ್ದರೆ, ಕೆಐಎಡಿಬಿ ಮತ್ತು ಮುಖ್ಯಮಂತ್ರಿಗಳ ಮನೆ ಮುಂದೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

970 ಎಕರೆ ನೋಟಿಫಿಕೇಷನ್‌: ಜಿಲ್ಲಾ ರಾಜ್ಯ ರೈತ ಸಂಘದ ಕಾರ್ಯದರ್ಶಿ ಹರೀಶ್‌ ಮಾತನಾಡಿ, ಒಟ್ಟು 12ಸಾವಿರ ಎಕರೆ ಐಟಿಎಆರ್‌ಗೆ 2009ರಲ್ಲಿ ನೊಟೀಫಿಕೇಷನ್‌ ಮಾಡಲಾಗಿತ್ತು. ಇದರಲ್ಲಿ 970ಎಕರೆ ನೋಟಿಫಿಕೇಷನ್‌ ಮಾಡಿದ್ದರು. ಉಳಿದ 10ಸಾವಿರ ಎಕರೆಯನ್ನು ಸಂಬಂಧಿಸಿದ ಸ್ವಾಧೀನಕ್ಕೆ ಒಳಪಡಿಸಿದ್ದರು. ಆದರೆ, 2 ಸಾವಿರ ಎಕರೆ ಭೂಸ್ವಾಧೀನಕ್ಕೆ ಮುಂದಾಗಿದ್ದಾರಲ್ಲ, ಈ ಭೂಮಿ ಅರ್ಕಾವತಿ ಕ್ಯಾಚ್‌ಮೆಂಟ್‌ ಏರಿಯವಾಗಿರುವ ನದಿ ಪಾತ್ರದ ಭೂಮಿಯಾಗಿದೆ ಎಂದರು.

Advertisement

ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಪ್ರಸನ್ನ, ಕಾಂಗ್ರೆಸ್‌ ಮುಖಂಡ ಅಪ್ಪಯ್ಯ, ಮುನಿರಾಜು, ಶ್ರೀನಿವಾಸ್‌, ಜೆಡಿಎಸ್‌ ಮುಖಂಡ ಕಾರಹಳ್ಳಿ ಶ್ರೀನಿವಾಸ್‌, ರೈತರಾದ ಅಶ್ವತ್‌ಗೌಡ, ಚಂದ್ರಶೇಕರ್‌.ಎ.ಎಚ್‌, ಅಶೋಕ, ಜಯರಾಮು, ಮಂಜುನಾಥ್‌, ಮಣಿ, ಮಹಿಳಾ ರೈತರಾದ ಜ್ಯೋತಿ, ಸಾವಿತ್ರಮ್ಮ, ಭವ್ಯಾ, ಚಂದ್ರಕಲಾ, ಮಂಜುಳಾ, ಸವಿತಾ, ಅಂಬುಜಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇತರರು ಇದ್ದರು.

ಒಂದಿಂಚು ಭೂಮಿ ಕೊಡಲ್ಲ: ಆಕ್ರೋಶ : ತಿಪ್ಪಗೊಂಡನಹಳ್ಳಿ ಕೆರೆಗೆ ನೀರು ಹರಿಯ ಲು ಇಲ್ಲಿನ ನದಿ ಪಾತ್ರವೇ ಕಾರಣ. ಇವತ್ತು ನದಿಮೂಲವನ್ನೆಲ್ಲಾ ಹಾಳು ಮಾಡಿ, ಯಾವ ಅಭಿವೃದ್ಧಿ ಮಾಡಲು ಹೊರಟಿ ದ್ದಾರೆ. ಸಾಕಷ್ಟು ಭೂಮಿ ಕಳೆದುಕೊಂಡಿ ದ್ದೇವೆ. ಇಂತಹ ಧೋರಣೆಯನ್ನು ಸರ್ಕಾರ ಕೈಬಿಡಬೇಕು. ಭೂಸ್ವಾಧೀನಕ್ಕೆ ಒಂದು ಇಂಚು ಭೂಮಿ ರೈತರು ಕೊಡುವುದಿಲ್ಲ. ಅದೇನು ಮಾಡಿಕೊಳ್ಳುತ್ತೀರೋ ಮಾಡಿ ಕೊಳ್ಳಿ ಎಂದು ಜಿಲ್ಲಾ ರಾಜ್ಯ ರೈತ ಸಂಘದ ಕಾರ್ಯದರ್ಶಿ ಹರೀಶ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next